ಕರ್ನಾಟಕ

karnataka

ETV Bharat / state

ಸಾರ್ವಜನಿಕ ಸ್ಥಳಗಳಲ್ಲಿ‌ 'ಗಾರ್ಡ್​ ಆಫ್​ ಆನರ್'​ ಕೊಡುವ ಅವಶ್ಯಕತೆ ಇಲ್ಲ: ಸಿಎಂ ಬೊಮ್ಮಾಯಿ - ಸಿಎಂ ಬಸವರಾಜ ಬೊಮ್ಮಾಯಿ‌

ಏರ್​ಪೋರ್ಟ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ‌ 'ಗಾರ್ಡ್​ ಆಫ್​ ಆನರ್'​ ಕೊಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ‌ ಹೇಳಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.

guard of honour not needed in public places says cm
ಸಿಎಂ ಬೊಮ್ಮಾಯಿ ಹೇಳಿಕೆ

By

Published : Aug 12, 2021, 9:26 PM IST

Updated : Aug 12, 2021, 9:49 PM IST

ಮಂಗಳೂರು:ಏರ್​ಪೋರ್ಟ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ‌ 'ಗಾರ್ಡ್​ ಆಫ್​ ಆನರ್'( ಗೌರವ ವಂದನೆ)​ ಕೊಡುವ ಅವಶ್ಯಕತೆ ಇಲ್ಲ. ಅಲ್ಲದೆ ಪ್ರತೀ ಬಾರಿ ಜಿಲ್ಲೆಗೆ ನಾನು ಭೇಟಿ ಕೊಟ್ಟಾಗಲೂ ಕೊಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ನಾಳೆ ಬೆಂಗಳೂರಿಗೆ ಹೋದ ತಕ್ಷಣ ಆದೇಶ ನೀಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಸಿಎಂ ಬೊಮ್ಮಾಯಿ ಹೇಳಿಕೆ

ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಇತ್ತೀಚೆಗಷ್ಟೇ ಸುತ್ತೋಲೆ ಹೊರಡಿಸಿದೆ. ಅದರ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಹೇಳಲಾಗಿದೆ.

ಈ ನಿರ್ದೇಶನವನ್ನು ಚಾಚು ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವಂತೆ ಈಗಾಗಲೇ ತಿಳಿಸಲಾಗಿದೆ.

ಇದನ್ನೂ ಓದಿ:ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಾರ, ತುರಾಯಿ ನಿಷೇಧ: ಪುಷ್ಪ ಬೆಳೆಗಾರರಿಂದ ಪ್ರತಿಭಟನೆ

Last Updated : Aug 12, 2021, 9:49 PM IST

ABOUT THE AUTHOR

...view details