ಬಂಟ್ವಾಳ: ನಾವೂರು ಗ್ರಾಮದ ಬಡಗುಂಡಿಯ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ದನವೊಂದನ್ನು ಇಲ್ಲಿನ ಯುವಕರು ರಕ್ಷಿಸಿದ್ದು, ಮೆಚ್ಚುಗೆ ಗಳಿಸಿದರು. ಗ್ರಾಮದ ಯುವಕರಾದ ರಕ್ಷಿತ್ ಮೈಂದಾಳ ಹಾಗೂ ಲೋಕೇಶ್ ನಾವೂರು ತಮ್ಮ ಸ್ನೇಹಿತರ ಸಹಾಯದೊಂದಿಗೆ ಮೂಕಪ್ರಾಣಿಯ ಪ್ರಾಣ ಉಳಿಸಿದರು.
ಪ್ರವಾಹದ ನೀರಲ್ಲಿ ಸಿಲುಕಿದ ಜಾನುವಾರು: ಗೃಹಪ್ರವೇಶಕ್ಕೆ ಬಂದ ಯುವಕರಿಂದ ರಕ್ಷಣೆ - Bantwal cow rescue news
ಪ್ರವಾಹದ ನೀರಿನಲ್ಲಿ ಸಿಲುಕಿದ್ದ ದನವನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದೆ. ಈ ಘಟನೆ ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ನಡೆದಿದೆ.
ಜಾನುವಾರು ರಕ್ಷಣೆ ಮಾಡಿದ ಯುವಕರು
ಸ್ಥಳೀಯ ನಿವಾಸಿ ಉಮೇಶ್ ಎಂಬವರು ತಮ್ಮ ಜಾನುವಾರುಗಳನ್ನು ಹೊಳೆಯ ಇನ್ನೊಂದು ಬದಿಗೆ ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಮಳೆಯಿಂದಾಗಿ ಹೊಳೆಯಲ್ಲಿ ಹೆಚ್ಚಿನ ನೀರು ಹರಿದುಬಂದಿತ್ತು. ಆಗ ದನವೊಂದು ನೀರಿನ ಮಧ್ಯೆ ಸಿಲುಕಿಕೊಂಡಿದೆ. ಈ ದೃಶ್ಯ ಅಲ್ಲೇ ಸಮೀಪದ ಗೃಹಪ್ರವೇಶ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಯುವಕರ ಕಣ್ಣಿಗೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಅವರು ನೀರಿಗಿಳಿದು ಜಾನುವಾರು ರಕ್ಷಿಸಿದರು.
ಈ ಕಾರ್ಯಕ್ಕೆ ವಿನಯ್ ಸೂರ, ಹೇಮಂತ್ ಸೂರ, ನಿಶಾಂತ್ ನಾವೂರು, ರಂಜಿತ್, ಪ್ರಜ್ವಲ್, ಸುಮಂತ್ ಸಹಕರಿಸಿದ್ದಾರೆ.