ಉಳ್ಳಾಲ :ಸಮಾಜದಲ್ಲಿ ಶಾಂತಿ ಕಾಪಾಡುವುದರೊಂದಿಗೆ, ಪೊಲೀಸ್ ಇಲಾಖೆ ಮತ್ತು ಸರ್ಕಾರದ ಕಾರ್ಯವನ್ನು ಅನುಷ್ಠಾನ ಮಾಡುವಲ್ಲಿ ಕಾಣದ ಕೈಗಳಂತೆ ಕೆಲಸ ಮಾಡುವವರು ಹೋಂ ಗಾರ್ಡ್ಗಳಾಗಿದ್ದಾರೆ. ನೂತನ ಉಳ್ಳಾಲ ಘಟಕಕ್ಕೆ ತಾಲೂಕು ರಚಣೆಯಾಗುವಾಗ ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಎಲ್ಲಾ ಹೋಂ ಗಾರ್ಡ್ಗಳಿಗೆ ಸಮಾನ ವೇತನ ನೀಡಲು ಸಂಬಂಧಿತ ಇಲಾಖೆಗೆ ಸೂಚನೆ ನೀಡುವುದಾಗಿ ಶಾಸಕ ಯು.ಟಿ. ಖಾದರ್ ಹೇಳಿದರು.
ಕಲ್ಲಾಪು ಆಡಂಕುದ್ರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ದ.ಕ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾಜಿಕ ಕಳಕಳಿಯಲ್ಲಿರುವವರು ಮಾತ್ರ ಹೋಂ ಗಾರ್ಡ್ನಲ್ಲಿ ಸ್ವಯಂ ಪ್ರೇರಿತಾರಾಗಿ ಕಾರ್ಯ ನಿರ್ವಹಿಸುತ್ತಾರೆ. ಇತರ ಸರ್ಕಾರಿ ಸಿಬಂದಿಗೆ ಹೋಲಿಸಿದರೆ ಸರ್ಕಾರಿ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಇವರ ವೇತನ ಕಡಿಮೆ ಇದೆ. ಪೊಲೀಸ್ ಸಿಬ್ಬಂದಿಗೆ ಉತ್ತಮ ವೇತನವಿದ್ದು, ಇದೇ ವೇತನವನ್ನು ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೂ ನೀಡಲು ಶಿಫಾರಸು ನೀಡುತ್ತೇನೆ ಎಂದರು ಭರವಸೆ ನೀಡಿದರು.