ಮಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ದ.ಕ. ಜಿಲ್ಲೆಯ ಗೋಶಾಲೆಗಳ ಜಾನುವಾರುಗಳಿಗೆ ಮೇವು ಹಾಗೂ ಇನ್ನಿತರ ಆಹಾರ ಸಾಮಾಗ್ರಿಗಳನ್ನು ಒದಗಿಸಲು ಧಾರ್ಮಿಕ ಹಾಗೂ ದತ್ತಿ ಇಲಾಖೆ 19 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ಮಂಜೂರು - ಗೋಶಾಲೆಗಳಿಗೆ 19 ಲಕ್ಷ ರೂ. ಅನುದಾನ ಮಂಜೂರು
ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಸೂಚನೆಯಂತೆ ಜಿಲ್ಲೆಯ 9 ಗೋಶಾಲೆಗೆ ಧನಸಹಾಯ ನೀಡಲಾಗಿದೆ.
ಬಂಟ್ವಾಳ ಕನ್ಯಾನದ ವಿಶ್ವೇಶತೀರ್ಥ ಗೋ ಸಂರಕ್ಷಣಾ ಕೇಂದ್ರಕ್ಕೆ 2 ಲಕ್ಷ ರೂ., ಪಜೀರು ಗೋವನಿತಾಶ್ರಯಕ್ಕೆ 5 ಲಕ್ಷ., ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ಗೋಶಾಲೆಗೆ 1 ಲಕ್ಷ., ಕೊಕ್ಕಡ ಕಾಮಧೇನು ಗೋಶಾಲೆಗೆ 2 ಲಕ್ಷ., ಕಟೀಲು ದೇವಳದ ನಂದಿನಿ ಗೋಶಾಲೆಗೆ 2 ಲಕ್ಷ., ಒಡಿಯೂರು ಗುರುದೇವ ಚಾರಿಟೇಬಲ್ ಟೆಸ್ಟ್ ಗೋಶಾಲೆಗೆ 2 ಲಕ್ಷ., ಮಡ್ಯಾರ್ ಪರಾಶಕ್ತಿ ದೇಗುಲದ ಗೋಶಾಲೆಗೆ 2 ಲಕ್ಷ., ಗಂಡಿಬಾಗಿಲು ಸಿಯಾನ್ ಆಶ್ರಮದ ಗೋಶಾಲೆಗೆ 1 ಲಕ್ಷ., ಕಲ್ಲಡ್ಕದ ರಾಮ ಗೋಶಾಲೆಗೆ 2 ಲಕ್ಷ ರೂ. ಒದಗಿಸಲಾಗಿದೆ.
ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಸೂಚನೆಯಂತೆ ಜಿಲ್ಲೆಯ 9 ಗೋಶಾಲೆಗೆ ಧನಸಹಾಯ ನೀಡಲಾಗಿದೆ.