ಮಂಗಳೂರು :ಆಕಸ್ಮಿಕವಾಗಿ ಲಾರಿಯಲ್ಲಿದ್ದ ಗ್ರಾನೈಟ್ಗಳು ಮೈಮೇಲೆ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಗರದ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ. ನಗರದ ಜಪ್ಪು ನಿವಾಸಿ ಅಬ್ದುಲ್ ರೆಹಮಾನ್ ರಿಲ್ವಾನ್(30) ಮೃತ ದುರ್ದೈವಿ.
ಅಬ್ದುಲ್ ರೆಹಮಾನ್ ರಿಲ್ವಾನ್ ಅತ್ತಾವರದಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಕಟ್ಟಡಕ್ಕೆಂದು ರಾಜಸ್ಥಾನದಿಂದ ಗ್ರಾನೈಟ್ ಹೇರಿಕೊಂಡು ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ಸೂಪರ್‌ವೈಸರ್ ಗ್ರಾನೈಟ್ ಫೋಟೋ ತೆಗೆಯಲು ಸೂಚಿಸಿದ್ದಾರೆನ್ನಲಾಗಿದೆ.