ಕರ್ನಾಟಕ

karnataka

ETV Bharat / state

ಏಷ್ಯನ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್​ಶಿಪ್‌ ಚಿನ್ನದ ಪದಕ ಪಡೆದ ಮಹಿಳೆಯರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ - Deepa KS won 6 medal in Asian Powerlifting Championships

ಶನಿವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪದಕ ವಿಜೇತರಿಗೆ ಶಾಲು, ಹಾರ ಹಾಕಿ ಅಭಿನಂದಿಸಲಾಯಿತು. ಡಿ.24ರಿಂದ 31ರವರೆಗೆ ಇಸ್ತಾಂಬುಲ್‌ನಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಚಾಪಿಯನ್‌ ಶಿಪ್‌ನಲ್ಲಿ 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು..

Asian Powerlifting Championships
ಏಷ್ಯನ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್​ಶಿಪ್‌ನಲ್ಲಿ ಪದಕ ಗೆದ್ದವರಿಗೆ ಸ್ವಾಗತ

By

Published : Jan 1, 2022, 3:49 PM IST

ಮಂಗಳೂರು : ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಏಷ್ಯನ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್​ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕಗಳನ್ನು ಪಡೆದ ಮಂಗಳೂರಿನ ದೀಪಾ ಕೆ.ಎಸ್, ವೆನಿಝಿಯಾ ಕಾರ್ಲೊ, ದೀಪಿಕಾ ಜಯಪುತ್ರನ್‌ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಶನಿವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪದಕ ವಿಜೇತರಿಗೆ ಶಾಲು, ಹಾರ ಹಾಕಿ ಅಭಿನಂದಿಸಲಾಯಿತು. ಡಿ.24ರಿಂದ 31ರವರೆಗೆ ಇಸ್ತಾಂಬುಲ್‌ನಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಚಾಪಿಯನ್‌ ಶಿಪ್‌ನಲ್ಲಿ 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಪವರ್​ಲಿಫ್ಟರ್​ಗಳಿಗೆ ಅದ್ದೂರಿ ಸ್ವಾಗತ..

ಇದರಲ್ಲಿ 76 ಕೆಜಿ ಮಾಸ್ಟರ್ಸ್‌ನ ಕ್ಲಾಸಿಕ್‌ ವಿಭಾಗದಲ್ಲಿ ದೀಪಾ ಕೆ.ಎಸ್.‌ ಆರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವೆನಿಝಿಯಾ ಕಾರ್ಲೊ ಅವರು ಜೂನಿಯರ್‌ ಇಕ್ವಿಪ್‌ ವಿಭಾಗದಲ್ಲಿ 4 ಚಿನ್ನ, ಕ್ಲಾಸಿಕ್‌ ವಿಭಾಗದಲ್ಲಿ 4 ಚಿನ್ನ, ಬೆಂಚ್‌ ಪ್ರೆಸ್‌ನಲ್ಲಿ 2 ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ. ದೀಪಿಕಾ ಪುತ್ರನ್‌ ಅವರು ಕಿರಿಯರ ಇಕ್ವಿಕ್‌ ವಿಭಾಗದಲ್ಲಿ 4 ಬೆಳ್ಳಿ, ಕ್ಲಾಸಿಕ್‌ ವಿಭಾಗದಲ್ಲಿ 4 ಬೆಳ್ಳಿ ಮತ್ತು ಬೆಂಚ್‌ ಪ್ರೆಸ್‌ನಲ್ಲಿ 2 ಬೆಳ್ಳಿಯ ಪದಕ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸತೀಶ್‌ ಕುಮಾರ್‌ ಕುದ್ರೋಳಿ, ಕೋಚ್‌ ಪ್ರದೀಪ್‌ ಕುಮಾರ್‌ ಆಚಾರ್ಯ, ವಿನ್ಸಂಟ್‌ ಕಾರ್ಲೊಸ್, ಕುಂಜತ್ತೋಡಿ ವಾಸುದೇವ ಭಟ್‌ ಕದ್ರಿ, ಪವರ್‌ ಲಿಪ್ಟರ್‌ ಗೀತಾ ಭಾಯಿ, ಪತ್ರಕರ್ತರ ಸಂಘದ ಜಿಲ್ಲಾ ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕದ್ರಿ ಯಕ್ಷಕೂಟದ ಸಂಚಾಲಕ ರಾಮಚಂದ್ರ ಭಟ್‌ ಎಲ್ಲೂರು ಮೊದಲಾದವರಿದ್ದರು.

ಇದನ್ನೂ ಓದಿ:ರಾಹುಲ್​ ಮೇಲೆ ವಿಶ್ವಾಸವಿದೆ, ಭವಿಷ್ಯದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ: ಆಯ್ಕೆ ಸಮಿತಿ ಅಧ್ಯಕ್ಷ

ABOUT THE AUTHOR

...view details