ಕರ್ನಾಟಕ

karnataka

ETV Bharat / state

ನ.17ರಿಂದ ಪದವಿ ಕಾಲೇಜುಗಳ ತರಗತಿಗಳು ಪ್ರಾರಂಭ ; ಜಿಲ್ಲಾಧಿಕಾರಿ ಡಾ.ರಾಜೇಂದ್ರ - Graduate college latest news

ಸರ್ಕಾರದ ಸೂಚನೆಯಂತೆ ನ.17ರಿಂದ ಪದವಿ ಕಾಲೇಜು ತರಗತಿಗಳು ಪ್ರಾರಂಭಗೊಳ್ಳಲಿವೆ. ಆರೋಗ್ಯ ದೃಷ್ಟಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ ಸೇರಿದಂತೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ..

Graduate college classes start from Nov. 17: DC Rajendra
ಜಿಲ್ಲಾಧಿಕಾರಿ ಡಾ.ರಾಜೇಂದ್ರ

By

Published : Nov 13, 2020, 7:19 PM IST

ಪುತ್ತೂರು:ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿ ಸಂಬಂಧಿಸಿದಂತೆ ಜಮೀನು ಸ್ವಾಧೀನದ ವಿಚಾರದಲ್ಲಿ ಗೊಂದಲವಿದ್ದು ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತ ಕಚೇರಿಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಪುತ್ತೂರು-ಉಪ್ಪಿನಂಗಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದೇ ರಸ್ತೆಯ ಪಕ್ಕದಲ್ಲಿ ಪುತ್ತೂರು ನಗರಕ್ಕೆ ಜಲಸಿರಿ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಹಾದು ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ 35 ಸೆಂಟ್ಸ್ ಜಮೀನು ಭೂಸ್ವಾಧೀನದ ವಿಚಾರದಲ್ಲಿ ಗೊಂದಲವಿದೆ.

ಇದೇ ರೀತಿ ಕೊಳ್ತಿಗೆ ಗ್ರಾಮದಲ್ಲೂ 25 ಸೆಂಟ್ಸ್ ಭೂಸ್ವಾಧೀನ ವಿಚಾರದಲ್ಲಿ ಅಸ್ಪಷ್ಟತೆ ಇದೆ. ದರಪಟ್ಟಿ ನಿಗದಿ ಕುರಿತು ಚರ್ಚಿಸಲು ಸಭೆ ನಡೆಸಲಾಗಿದೆ. ಈ ವೇಳೆ ರೈತ ಮುಖಂಡರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಶೀಘ್ರದಲ್ಲೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಪದವಿ ಕಾಲೇಜು ಆರಂಭ :ಸರ್ಕಾರದ ಸೂಚನೆಯಂತೆ ಪದವಿ ಕಾಲೇಜು ತರಗತಿಗಳು ನ.17ರಿಂದ ಪ್ರಾರಂಭಗೊಳ್ಳಲಿವೆ. ಆರೋಗ್ಯ ದೃಷ್ಟಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ ಸೇರಿದಂತೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಡಿಸಿ ಮನ್ನಾ ಭೂಮಿ ಯೋಜನೆ :ದಮನಿತ ಸಮುದಾಯಕ್ಕೆ ನೀಡಲೆಂದು ಬ್ರಿಟಿಷ್ ಆಡಳಿತದ ಕಾಲದಲ್ಲಿ ಡಿ.ಸಿ. ಮನ್ನಾ ಭೂಮಿ ಯೋಜನೆ ಜಾರಿಗೆ ತರಲಾಗಿತ್ತು. ಈ ಭೂಮಿಯನ್ನು ಪರಿಶಿಷ್ಟ ಸಮುದಾಯವು ಸೇರಿದಂತೆ ದಮನಿತ ಸಮುದಾಯಕ್ಕೆ ವಿತರಿಸುವ ಕಾರ್ಯ ಇನ್ನೂ ಕೂಡ ಆಗಿಲ್ಲ. ಅನೇಕ ಕಡೆ ಇವುಗಳನ್ನು ಅತಿಕ್ರಮಣ ಮಾಡಲಾದ ದೂರುಗಳೂ ಇವೆ. ಈ ಬಗ್ಗೆ ಗ್ರಾಮ ಮಟ್ಟದಿಂದಲೇ ಸಮಗ್ರ ಅಧ್ಯಯನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಕಂಬಳ ವಿಚಾರದಲ್ಲಿ ಮನವಿ ಬಂದಿಲ್ಲ:ಕಂಬಳ ವಿಚಾರದಲ್ಲಿ ಯಾರಿಂದಲೂ ಮನವಿ ಬಂದಿಲ್ಲ. ಮನವಿ ಬಂದ ಬಳಿಕ ಸರ್ಕಾರದ ಮಾರ್ಗದರ್ಶಿ ಸೂತ್ರ ಮುಂದಿಟ್ಟುಕೊಂಡು ಅದರಂತೆ ನಿರ್ಧಾರ ಕೈಗೊಳ್ಳಲಾಗುವುದು. ವನ್-ಧನ್ ಯೋಜನೆ ಅಡಿಯಲ್ಲಿ ಕಾಡುತ್ಪತ್ತಿ ಉತ್ಪನ್ನಗಳ ಮಾರಾಟ ಮಾಡುವವರಿಗಾಗಿ ಚಾರ್ಮಾಡಿ ಮತ್ತು ಸುಬ್ರಹ್ಮಣ್ಯದಲ್ಲಿ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ.

ತಲಾ ₹15 ಲಕ್ಷದಂತೆ ₹30 ಲಕ್ಷ ಅನುದಾನ ಇದ್ದು, ಈ ಬಗ್ಗೆ ಲ್ಯಾಂಪ್ಸ್ ಸೊಸೈಟಿ ಜತೆ ಸಮಾಲೋಚನೆ ನಡೆಸಲಾಗಿದೆ. ಕಂಬಳಕ್ಕೆ ಅನುಮತಿ ನೀಡುವ ಬಗ್ಗೆ ಈ ತನಕ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ABOUT THE AUTHOR

...view details