ಕಡಬ:ನಗರದ ಕಂದಾಯ ಇಲಾಖೆಯ ಸಮೀಪದಲ್ಲಿ ಸರ್ಕಾರಿ ಜೀಪು ಹಾಗೂ ದೊಡ್ಡ ಜನರೇಟರ್ವೊಂದು ನಿರ್ವಹಣೆ ಇಲ್ಲದೇ ತುಕ್ಕು ಹಿಡಿದು ಮೂಲೆಗೆ ಸೇರಿವೆ.
ಕಂದಾಯ ಇಲಾಖೆಯ ಬೇಜಾಬ್ದಾರಿ..ನಶಿಸಿ ಹೋಗುತ್ತಿದೆ ಸಾರ್ವಜನಿಕ ಆಸ್ತಿಗಳು - ಸರಿಯಾದ ನಿರ್ವಣೆ ಇಲ್ಲ
ಸರ್ಕಾರಿ ಕಚೇರಿಗಳಲ್ಲಿ ಬಳಸುತ್ತಿರುವ ಸಾರ್ವಜನಿಕ ಸ್ವತ್ತುಗಳಿಗೆ ಸರಿಯಾದ ನಿರ್ವಣೆ ಇಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿದು ಮೂಲೆಗೆ ಸೇರುತ್ತಿವೆ.
![ಕಂದಾಯ ಇಲಾಖೆಯ ಬೇಜಾಬ್ದಾರಿ..ನಶಿಸಿ ಹೋಗುತ್ತಿದೆ ಸಾರ್ವಜನಿಕ ಆಸ್ತಿಗಳು](https://etvbharatimages.akamaized.net/etvbharat/prod-images/768-512-4996302-thumbnail-3x2-ggg.jpg)
ಇಲ್ಲಿನ ಕಂದಾಯ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಜೀಪ್ ಇಲಾಖೆಯ ಬೇಜಾವಬ್ದಾರಿಯಿಂದ ದುರಸ್ತಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದೆ. ಇನ್ನು ಇದರ ಪಕ್ಕದಲ್ಲೇ ಇರುವ ತುಕ್ಕು ಹಿಡಿದ ಆಧುನಿಕ ಜನರೇಟರ್ ಅನ್ನು ದುರಸ್ತಿ ಮಾಡಿದ್ದೇ ಆದರೆ, ನೂತನ ಕಡಬ ತಾಲೂಕಿನಲ್ಲಿ ಆರಂಭವಾಗುವ ಮಿನಿ ವಿಧಾನಸೌದ ಅಥವಾ ಬೇರೆ ಯಾವುದಾದರೂ ಇತರೆ ಇಲಾಖಾ ಕಚೇರಿಗಳಿಗೆ ಇದನ್ನು ಬಳಸಬಹುದು. ಆದರೆ ಲಕ್ಷಗಟ್ಟಲೆ ಹಣ ಖರ್ಚುಮಾಡಿ ಖರೀದಿಸಿದ ಈ ಜನರೇಟರ್ ಯಾವುದೇ ನಿರ್ವಹಣೆ ಇಲ್ಲದೇ ಈಗಾಗಲೇ ಬಹುತೇಕ ಕೆಟ್ಟು ಹೋಗುವ ಹಂತದಲ್ಲಿದೆ. ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿರುವ ಸರ್ಕಾರಿ ವಸ್ತುಗಳು ಮೂಲೆ ಗುಂಪಾಗುತ್ತಿವೆ.
ಈ ಬಗ್ಗೆ ಪ್ರಸ್ತುತ ಕಡಬದಲ್ಲಿ ಅಧಿಕಾರದಲ್ಲಿರುವ ಯಾವುದೇ ಅಧಿಕಾರಿಗಳನ್ನು ಕೇಳಿದರೂ, ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಮಣ್ಣು ಪಾಲಾಗುತ್ತಿರುವ ಈ ಸರ್ಕಾರಿ ವಸ್ತುಗಳನ್ನು ದುರಸ್ತಿ ಮಾಡುವ ಅಥವಾ ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕೆಲಸಕ್ಕೆ ಸಂಬಂಧಿಸಿದ ಅಧಿಕಾರಿಗಳು ,ಅಥವಾ ಇಲಾಖೆಗಳು ಮುತುವರ್ಜಿವಹಿಸಬೇಕಿದೆ.