ಕರ್ನಾಟಕ

karnataka

ETV Bharat / state

ಮಂದಾರ ಕೇಶವ ಭಟ್ಟರ ಮನೆ ಉಳಿಸಲು ಸರಕಾರಕ್ಕೆ ಒತ್ತಾಯ: ದಯಾನಂದ ಕತ್ತಲ್ ಸಾರ್ - ದಯಾನಂದ ಕತ್ತಲ್ ಸಾರ್ ಹೇಳಿಕೆ

ಪಚ್ಚನಾಡಿಯ ಡಂಪ್ ಯಾರ್ಡ್ ದುರಂತದಿಂದ ಹಾನಿಗೊಳಗಾದ ತುಳುವಿನ ಹಿರಿಯ ಸಾಹಿತಿ ಮಂದಾರ ಕೇಶವ ಭಟ್ಟರ ಉಳಿಸಲು ಸರಕಾರಕ್ಕೆ ಒತ್ತಾಯ ಮಾಡುವುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.

ಮಂದಾರ ಕೇಶವ ಭಟ್ಟರ ಮನೆ ಉಳಿಸಲು ಸರಕಾರಕ್ಕೆ ಒತ್ತಾಯ: ದಯಾನಂದ ಕತ್ತಲ್ ಸಾರ್

By

Published : Nov 2, 2019, 12:40 PM IST

ಮಂಗಳೂರು: ಪಚ್ಚನಾಡಿಯ ಡಂಪ್ ಯಾರ್ಡ್ ದುರಂತದಿಂದ ಹಾನಿಗೊಳಗಾದ ತುಳುವಿನ ಹಿರಿಯ ಸಾಹಿತಿ ಮಂದಾರ ಕೇಶವ ಭಟ್ಟರ ಉಳಿಸಲು ಸರಕಾರಕ್ಕೆ ಒತ್ತಾಯ ಮಾಡುವುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.

ಮಂದಾರ ಕೇಶವ ಭಟ್ಟರ ಮನೆ ಉಳಿಸಲು ಸರಕಾರಕ್ಕೆ ಒತ್ತಾಯ: ದಯಾನಂದ ಕತ್ತಲ್ ಸಾರ್

ಮನೆಗೆ ಭೇಟಿ ನೀಡಿ ಮಾತನಾಡಿದ ಅವರು , ಈ ಮನೆಯ ಪುನರ್ನಿರ್ಮಾಣ ಕಾರ್ಯ ಮಾಡಲು ಸರಕಾರವನ್ನು ಒಪ್ಪಿಸುವ ಪ್ರಯತ್ನ ಮಾಡುತ್ತೇನೆ. ಜೊತೆಗೆ ಮಂದಾರ ಪ್ರದೇಶದಲ್ಲಿನ 27 ಕುಟುಂಬ ನಿರಾಶ್ರಿತರಾಗಿದ್ದು, ಅವರಿಗೆ ಈಗಾಗಲೇ ಜಿಲ್ಲಾಡಳಿತ ಒಂದು ನಿವೇಶನ ಒದಗಿಸಿದೆ. ಅದನ್ನು ಶಾಶ್ವತವಾಗಿ ಆ ನಿರಾಶ್ರಿತರಿಗೆ ಕೊಟ್ಟುಬಿಡಬೇಕೆಂದು ಸರಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದರು. ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದಲೇ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಮಂದಾರ ಕೇಶವ ಭಟ್ಟರು ತುಳುವಿನಲ್ಲಿ ಮಂದಾರ ರಾಮಾಯಣವೆನ್ನುವ ಶ್ರೇಷ್ಠ ಕಾವ್ಯವನ್ನು ಬರೆದಿದ್ದು, ತುಳು ಎಂಟನೇ ಪರಿಚ್ಛೇದಕ್ಕೆ ಸೇರುತ್ತಿದ್ದರೆ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರವಾಗುವಷ್ಟು ಮೌಲಿಕ‌ವಾಗಿದೆ. ಮರಾಠಿ ಬ್ರಾಹ್ಮಣರಾದರೂ ತುಳುವಿನಲ್ಲಿ ಕಾವ್ಯವನ್ನು ಬರೆದ ಮಂದಾರ ಕೇಶವ ಭಟ್ಟರ ಮನೆಯು ಸಂಪೂರ್ಣ ಸರ್ವನಾಶವಾಗಿರೋದು ಬಹಳ ಖೇದಕರ. ಮಂದಾರ ಕೇಶವ ಭಟ್ಟರ ನೆನಪನ್ನು ಉಳಿಸುವುದು ತುಳು ಸಾಹಿತ್ಯ ಅಕಾಡೆಮಿಯ ಆದ್ಯ ಕರ್ತವ್ಯ ಎಂದರು.

ಗೋವಿಂದ ಪೈ ಮನೆ, ಕುವೆಂಪು ಮನೆಯನ್ನು ಉಳಿಸುವ ರೀತಿಯಲ್ಲಿ ಮಂದಾರ ಕೇಶವ ಭಟ್ಟರ ನೆನಪು ಉಳಿಯುವಂತೆ ಮಾಡುವುದಾರೆ ಈ ಮನೆಯನ್ನು ಸರಕಾರಕ್ಕೆ ಬಿಟ್ಟು ಕೊಡುವುದಾಗಿ ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಈ ಮೂಲಕ ನನ್ನಿದಾದ ಪ್ರಯತ್ನ ಮಾಡುವೆ. ಅಲ್ಲದೆ ಹಿರಿಯ ಸಾಹಿತಿಯ ಮನೆಯನ್ನು ಉಳಿಸುವಲ್ಲಿ ಸರಕಾರ, ಮನಪಾ, ಹಾಗೂ ತುಳು ಭಾಷಾ ಪ್ರೇಮಿಗಳು ಮುಂದೆ ಬರಬೇಕಾಗಿದೆ ಎಂದು ಹೇಳಿದರು.

ABOUT THE AUTHOR

...view details