ಕಡಬ(ದಕ್ಷಿಣ ಕನ್ನಡ):ಸರ್ಕಾರಿ ಬಸ್ಸೊಂದರ ಹೆಡ್ಲೈಟ್ ಇಲ್ಲದೆ ಸುಮಾರು 10 ಕಿ.ಮೀ. ಗೂ ಅಧಿಕ ದೂರದವರೆಗೆ ಬಸ್ ಚಲಾಯಿಸಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕನೋರ್ವ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಘಟನೆ ಸೋಮವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.
ಮಂಗಳೂರು: ಹೆಡ್ಲೈಟ್ ಇಲ್ಲದಿದ್ದರೂ ಕತ್ತಲಲ್ಲೇ ಪ್ರಯಾಣಿಕರಿದ್ದ ಬಸ್ ಚಲಾಯಿಸಿ ಚಾಲಕನ ದುಸ್ಸಾಹಸ! - ಕಾರವಾರ- ಕುಕ್ಕೆ ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್
ಬಸ್ಸಿನಲ್ಲಿ ಸುಮಾರು ಐವತ್ತರಷ್ಟು ಪ್ರಯಾಣಿಕರಿದ್ದು, ಅದರ ಪರಿವೇಯೇ ಇಲ್ಲದೆ ಚಾಲಕ ಉಪ್ಪಿನಂಗಡಿಯಿಂದ ಆಲಂಕಾರುವರೆಗೆ ಬಸ್ಸನ್ನು ಕತ್ತಲಲ್ಲೇ ಚಲಾಯಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.
ಉಪ್ಪಿನಂಗಡಿಯಿಂದ ರಾತ್ರಿ 7.15ಕ್ಕೆ ಕಡಬ ಕಡೆಗೆ ಹೊರಟ ಕಾರವಾರ - ಕುಕ್ಕೆಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ನಲ್ಲಿ ಮುಂಭಾಗದ ನಾಲ್ಕು ಲೈಟ್ಗಳು ಕೆಟ್ಟುಹೋಗಿದ್ದು, ಬಸ್ಸಿನ ಚಾಲಕ ತನ್ನ ಬೇಜವಾಬ್ದಾರಿಯಿಂದಾಗಿ ಕತ್ತಲೆಯಲ್ಲೇ ಬಸ್ಸನ್ನು ಚಲಾಯಿಸಿ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಬಸ್ಸಿನಲ್ಲಿ ಸುಮಾರು ಐವತ್ತರಷ್ಟು ಪ್ರಯಾಣಿಕರಿದ್ದು, ಅದರ ಪರಿವೇಯೇ ಇಲ್ಲದೆ ಚಾಲಕ ಉಪ್ಪಿನಂಗಡಿಯಿಂದ ಆಲಂಕಾರುವರೆಗೆ ಬಸ್ಸನ್ನು ಕತ್ತಲಲ್ಲೇ ಚಲಾಯಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.
ಈ ನಡುವೆ ಬಸ್ಸಿನ ಒಳಗಿನಿಂದ ಪ್ರಯಾಣಿಕರೋರ್ವರು ವಿಡಿಯೋ ಮಾಡುವುದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕ ಆಲಂಕಾರು ತಲುಪುತ್ತಿದ್ದಂತೆ ಒಂದು ಲೈಟನ್ನು ಸರಿಪಡಿಸಿ ಬಸ್ಸನ್ನು ಚಲಾಯಿಸಿದ್ದಾರೆ. ಒಟ್ಟಿನಲ್ಲಿ ಬದಲಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕಳುಹಿಸುವ ಬದಲು ಚಾಲಕ ಮಾಡಿರುವ ದುಸ್ಸಾಹಸಕ್ಕೆ ಬಸ್ಸಿನಲ್ಲಿನದ್ದ ಪ್ರಯಾಣಿಕರು ಸಿಟ್ಟಾಗಿದ್ದರು.