ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣೆಯ ನೂತನ ವೃತ್ತ ನಿರೀಕ್ಷಕರಾಗಿ ಎಂ. ಗೋಪಾಲ ನಾಯ್ಕರವರು ಇಂದು ಅಧಿಕಾರ ಸ್ವೀಕರಿಸಿದರು.
ಪುತ್ತೂರು ನಗರ ಪೊಲೀಸ್ ಠಾಣೆಯ ನೂತನ ಸಿಐ ಆಗಿ ಎಂ. ಗೋಪಾಲ ನಾಯ್ಕ ಅಧಿಕಾರ ಸ್ವೀಕಾರ - ಪೊಲೀಸ್ ಠಾಣೆಯ ನೂತನ ಸಿ.ಐ
ಪುತ್ತೂರು ನಗರ ಪೊಲೀಸ್ ಠಾಣೆಯ ನೂತನ ವೃತ್ತ ನಿರೀಕ್ಷಕರಾಗಿ ಎಂ. ಗೋಪಾಲ ನಾಯ್ಕರವರು ಇಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ. ಆಗಿ ಬಳಿಕ ನಕ್ಸಲ್ ನಿಗ್ರಹ ಪಡೆಯಲ್ಲಿ ವೃತ್ತ ನಿರೀಕ್ಷಕರಾಗಿ ಕಳೆದ ಒಂದೂವರೆ ವರ್ಷಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ತಿಮ್ಮಪ್ಪ ನಾಯ್ಕರವರು ಮಂಗಳೂರಿನ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆ ಗೋಪಾಲ ನಾಯ್ಕರವರು ಪುತ್ತೂರು ನಗರ ಠಾಣೆಯ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದರು.
ಎಂ.ಗೋಪಾಲ್ ನಾಯ್ಕ ಅವರು ಮೂಲತಃ ಚಿತ್ರದುರ್ಗದವರಾಗಿದ್ದು ಈ ಹಿಂದೆ ಕೋಟ, ಅಮವಾಸ್ಯೆ ಬೈಲು, ಗಂಗೊಳ್ಳಿ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು.