ಮಂಗಳೂರು/ಹುಬ್ಬಳ್ಳಿ:ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಕಾರ್ಯವನ್ನು ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಮಾಡುತ್ತಿದೆ. ಆದ್ರೀಗ ಕೊರೊನಾ - ಲಾಕ್ಡೌನ್ ಎಫೆಕ್ಟ್, ಇಂಧನ ಬೆಲೆ ಏರಿಕೆ ಸಮಸ್ಯೆ ಸೇರಿದಂತೆ ಲಾರಿ ಚಾಲಕರ ಕೊರತೆಯಿಂದಾಗಿ ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಲಾರಿ ಮಾಲೀಕರು ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ತಿಂಗಳಿಗೆ ಕನಿಷ್ಟ ಅಂದರೂ 3 ಟ್ರಿಪ್ ಆದರೆ ಮಾತ್ರ ಲಾರಿ ಮಾಲೀಕರಿಗೆ ಲಾಭದಾಯಕವಾಗಬಲ್ಲದು. ಆದ್ರೆ ಲಾರಿಗಳು ಹೆಚ್ಚಾಗಿದ್ದು, ಸರಕು ಸಾಗಿಸುವವರು ಕಡಿಮೆಯಾದ್ರಿಂದ ತಿಂಗಳಿಗೆ 2 ಟ್ರಿಪ್ ಆಗೋದೇ ಕಷ್ಟ ಅಂತಾರೆ ಮಂಗಳೂರು ಲಾರಿ ಮಾಲೀಕರು.
ಇನ್ನು, ಲಾರಿ ಮಾಲೀಕರಿಗೆ ಸರಿಯಾಗಿ ಲಾರಿ ಚಾಲಕರು ಸಿಗದಿರುವುದೇ ಇದೀಗ ದೊಡ್ಡ ಸಮಸ್ಯೆಯಾಗಿದೆ. ಇದ್ರ ಮೇಲೆ ಇಂಧನ ದರದ ಹೊಡೆತ ಬೇರೆ. ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.