ಕರ್ನಾಟಕ

karnataka

ETV Bharat / state

ವಾರಾಂತ್ಯದ ಕರ್ಫ್ಯೂಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ - ಮಂಗಳೂರಿನಲ್ಲಿ ವಾರಾಂತ್ಯದ ಕರ್ಫ್ಯೂ

ಮಂಗಳೂರಿನಲ್ಲಿ ವಾರಾಂತ್ಯದ ಕರ್ಫ್ಯೂಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯೇ ಅಗತ್ಯ ವಸ್ತುಗಳನ್ನು ಖರೀದಿಸಿದ ಜನತೆ ಕರ್ಫ್ಯೂಗೆ ಬೆಂಬಲ ನೀಡಿ ಮನೆ ಸೇರಿಕೊಂಡಿದ್ದರು.

Good response to  weekend curfew in Mangalore
ವಾರಾಂತ್ಯದ ಕರ್ಫ್ಯೂಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ

By

Published : May 9, 2021, 3:31 PM IST

ಮಂಗಳೂರು: ವಾರಾಂತ್ಯದ ಕರ್ಫ್ಯೂಗೆ ನಿನ್ನೆಯಂತೆ ಇವತ್ತು ಸಹ ಮಂಗಳೂರಿಗರಿಂದ ಉತ್ತಮ ಬೆಂಬಲ ದೊರಕಿದೆ. ಜನರ ಓಡಾಟ, ವಾಹನ ಸಂಚಾರಕ್ಕೆ ಪೊಲೀಸರು ಸಂಪೂರ್ಣ ಕಡಿವಾಣ ಹಾಕಿದ್ದಾರೆ.

ಇದನ್ನು ಓದಿ:ಸದ್ದಿಲ್ಲದೆ ಎಸ್ಐಟಿ ಮುಂದೆ ಹಾಜರಾದ‌ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಳಗ್ಗೆ 6 ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಕರ್ಫ್ಯೂ ಸಡಿಲಿಕೆ ಇದ್ದರೂ ಸಹ ಅನಗತ್ಯ ಓಡಾಟಕ್ಕೆ ಅವಕಾಶವಿರಲಿಲ್ಲ. ಜನರು ಹಾಲು, ತರಕಾರಿ, ಮೀನು, ಮಾಂಸ, ದಿನಸಿ ಸಾಮಗ್ರಿಗಳ ಖರೀದಿಗೆ ಹತ್ತಿರದ ಅಂಗಡಿಗಳಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು.

ಭಾನುವಾರದ ಕಾರಣ ಬ್ಯಾಂಕ್, ಸರ್ಕಾರಿ ಕಚೇರಿಗಳು ರಜೆ ಇರುವುದರಿಂದ ಜನ ಸಂಚಾರ ಕಡಿಮೆಯಾಗಿತ್ತು.

ABOUT THE AUTHOR

...view details