ಕರ್ನಾಟಕ

karnataka

ETV Bharat / state

ಸಂಡೇ ಲಾಕ್‌ಡೌನ್‌ಗೆ​​ ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ - ಬೆಳ್ತಂಗಡಿ ಸಂಡೇ ಲಾಕ್​ ಡೌನ್ ಸುದ್ದಿ

ಕೆಎಸ್​​ಆರ್​ಟಿಸಿ, ಖಾಸಗಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಆಟೋ ಹಾಗೂ ಇತರ ಯಾವುದೇ ವಾಹನಗಳು ಕಂಡುಬರಲಿಲ್ಲ. ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಚಾರ್ಮಾಡಿಗಳಲ್ಲಿ ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ನಿಲ್ಲಿಸಿ ವಿಚಾರಣೆ ನಡೆಸಿ ಅಗತ್ಯ ಕೆಲಸಗಳಿಗೆ ಹೋಗುವವರನ್ನು ಮಾತ್ರ ಬಿಡುತ್ತಿದ್ದಾರೆ.

ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ
ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ

By

Published : Jul 5, 2020, 2:30 PM IST

ಬೆಳ್ತಂಗಡಿ/ಸುಳ್ಯ: ಕೊರೂನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಮಾಡಿದ ಲಾಕ್‌ಡೌನ್​​ನಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹಾಲು, ಪತ್ರಿಕೆ, ಔಷಧ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.

ಮಾನವೀಯತೆ ಮೆರೆದ ಬೆಳ್ತಂಗಡಿ ಪೊಲೀಸರು :

ಧರ್ಮಸ್ಥಳಕ್ಕೆಂದು ಆಗಮಿಸಿದ್ದ ವೃದ್ಧ ದಂಪತಿ ಉಜಿರೆ ಬಸ್ ನಿಲ್ದಾಣದಲ್ಲಿ ಆಹಾರವಿಲ್ಲದೆ ಪರದಾಡುತ್ತಿದ್ದ ವಿಚಾರ ತಿಳಿದು ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಧರ್ಮಸ್ಥಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ

ಸುಳ್ಯ ತಾಲೂಕಿನಲ್ಲೂ ಲಾಕ್​ಡೌನ್​ಗೆ ಉತ್ತಮ ಪ್ರತಿಕ್ರಿಯೆ:

ದ.ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಲ್ಲಿ ಲಾಕ್‌ಡೌನ್ ಉತ್ತಮ ಬೆಂಬಲ ದೊರೆತಿದೆ. ಮೆಡಿಕಲ್, ಪೆಟ್ರೋಲ್ ಬಂಕ್, ಆಸ್ಪತ್ರೆ ಹೊರತುಪಪಡಿಸಿ ಯಾವುದೇ ಅಂಗಡಿಗಳು ಬಾಗಿಲು ತೆರದಿಲ್ಲ. ಬೆರಳೆಣಿಕೆಯ ವಾಹನಗಳು ಹೊರತುಪಡಿಸಿದರೆ ರಸ್ತೆಗಳೂ ಖಾಲಿ ಖಾಲಿಯಾಗಿದ್ದವು.

ಮುಂಜಾನೆ ಹಾಲು ಮತ್ತು ಪೇಪರ್‌ಗಾಗಿ ಜನರು ಆಗಮಿಸಿದ್ದು ಬಳಿಕ ಜನರ ಓಡಾಟಕ್ಕೂ ಕಡಿವಾಣ ಬಿದ್ದಿದೆ. ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದ ಪೊಲೀಸರ ತಂಡ ಠಾಣಾ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದು ಆಯಾ ಠಾಣಾ ಮುಂಭಾದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಮೇಲೆ ನಿಗಾವಹಿಸಿದ್ದಾರೆ. ಅನಗತ್ಯ ತಿರುಗಾಟ ಮಾಡುತ್ತಿರುವ ವಾಹನಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ. ತುರ್ತು ಸೇವೆಯ ವಾಹನಗಳಿಗೆ ಮಾತ್ರ ಸ್ವಲ್ಪಮಟ್ಟಿನ ವಿನಾಯಿತಿ ನೀಡಲಾಗಿದೆ.

ABOUT THE AUTHOR

...view details