ಕರ್ನಾಟಕ

karnataka

ETV Bharat / state

ಮಂಗಳೂರು ಗೋಲಿಬಾರ್​ ಪ್ರಕರಣ: ನಗರಕ್ಕೆ ಬಂದ ಕಾಂಗ್ರೆಸ್​ ನಿಯೋಗ ಪೊಲೀಸ್​ ವಶಕ್ಕೆ - congress deligation arrested in Manglore Airport

ಮಂಗಳೂರು ಗೋಲಿಬಾರ್​ಗೆ ಸಂಬಂಧಿಸಿದಂತೆ ನಗರಕ್ಕೆ ಬಂದ ಕಾಂಗ್ರೆಸ್​ ನಿಯೋಗದ ಸದಸ್ಯರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್​ ನಿಯೋಗ ಪೊಲೀಸ್​ ವಶಕ್ಕೆ, congress deligation arrested in Manglore Airport
ಕಾಂಗ್ರೆಸ್​ ನಿಯೋಗ ಪೊಲೀಸ್​ ವಶಕ್ಕೆ

By

Published : Dec 20, 2019, 1:43 PM IST

Updated : Dec 20, 2019, 3:04 PM IST

ಮಂಗಳೂರು: ಮಂಗಳೂರು ಗೋಲಿಬಾರ್​ಗೆ ಸಂಬಂಧಿಸಿದಂತೆ ನಗರಕ್ಕೆ ಬಂದ ಕಾಂಗ್ರೆಸ್​ ನಿಯೋಗದ ಸದಸ್ಯರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ನಿಯೋಗದಲ್ಲಿ ಎಂ.ಬಿ. ಪಾಟೀಲ್, ವಿ.ಎಸ್​ ಉಗ್ರಪ್ಪ, ವಿ.ಎಸ್​.ಪಾಟೀಲ್​, ರಾಯರೆಡ್ಡಿ, ರಮೇಶ್​ ಕುಮಾರ್​ ಇದ್ದರು. ಇವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಪೊಲೀಸರು ಅವರನ್ನು ವಾಪಸ್​ ತೆರಳುವಂತೆ ಸೂಚಿಸಿದ್ದಾರೆ. ಆದರೆ ನಿಯೋಗದಲ್ಲಿರುವ ಮುಖಂಡರು, ನಾವು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕು. ನಮಗೆ ಭೇಟಿಗೆ ಅವಕಾಶ ನೀಡಿ ಎಂದು ತಿಳಿಸಿದ್ದಾರೆ.

ವಾಪಸ್​ ತೆರಳುವಂತೆ ಸೂಚನೆ ನೀಡಿದರೂ, ಹೋಗದ ಹಿನ್ನೆಲೆ ಕಾಂಗ್ರೆಸ್​ ಮುಖಂಡರಿಗೆ ಏರ್​ಪೋರ್ಟ್​ನಲ್ಲೇ ಪೊಲೀಸರು ದಿಗ್ಭಂಧನ ಹೇರಿದ್ದಾರೆ. ಇನ್ನು ತಮಗೆ ತೆರಳಲು ಅವಕಾಶ ನೀಡದಿರುವುದಕ್ಕೆ ಕಾಂಗ್ರೆಸ್​ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್​​ ಕುಮಾರ್ ಇದು ಹಿಟ್ಲರ್​ ನೀತಿ ಇಂತಹ ಪರಿಸ್ಥಿತಿ ಎಲ್ಲೂ ಆಗಿಲ್ಲ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಉಗ್ರಪ್ಪ ಮಾತನಾಡಿ, ನಮ್ಮನ್ನು ಬಂಧಿಸುವ ಅಗತ್ಯವಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತ ಮಂಗಳೂರಿಗೆ ಬಂದ ಕಾಂಗ್ರೆಸ್​ ನಾಯಕರನ್ನು ಭೇಟಿಯಾಗಲು ಸ್ಥಳೀಯ ಕೈ ನಾಯಕರಾದ ಯು.ಟಿ. ಖಾದರ್​, ಐವನ್ ಡಿಸೋಜ, ವಿನಯ್ ಕುಮಾರ್ ಸೊರಕೆ, ಮಿಥುನ್​ ರೈ ಸೇರಿ ಇನ್ನಿತರ ಕಾಂಗ್ರೆಸ್​ ಮುಖಂಡರು ಆಗಮಿಸಿದ್ದರು.

Last Updated : Dec 20, 2019, 3:04 PM IST

ABOUT THE AUTHOR

...view details