ಕರ್ನಾಟಕ

karnataka

ETV Bharat / state

ವಿಶೇಷ ಒಳ ಉಡುಪಿನಲ್ಲಿಟ್ಟು 43.88 ಲಕ್ಷ ರೂ. ಚಿನ್ನ ಸಾಗಣೆ: ಒಬ್ಬನ ಬಂಧನ - ಮಂಗಳೂರು ವಿಮಾನ ನಿಲ್ದಾಣ ಚಿನ್ನ ವಶ

ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ಏರ್ಪೋರ್ಟ್​ಗೆ ಬಂದಿಳಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ವಿಶೇಷ ವಿನ್ಯಾಸದ ಒಳ ಉಡುಪಿನಲ್ಲಿ ಚಿನ್ನವನ್ನು ಪುಡಿ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

gold-worth-rs-43-dot-88-lakh-seized-at-mangalore-international-airport
ಮಂಗಳೂರು ಏರ್ಪೋರ್ಟ್​

By

Published : Oct 8, 2021, 9:08 PM IST

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವಿನ್ಯಾಸದ ಒಳ ಉಡುಪಿನಲ್ಲಿರಿಸಿ 43,88,400 ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಓರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ‌.

ವಿಶೇಷ ಒಳ ಉಡುಪಿನಲ್ಲಿಟ್ಟು 43.88 ಲಕ್ಷ ರೂ. ಚಿನ್ನ ಸಾಗಾಟ

ಕಾಸರಗೋಡು ಮೂಲದ ವ್ಯಕ್ತಿ ಬಂಧಿತ ಆರೋಪಿ. ಈತ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ಏರ್ಪೋರ್ಟ್​ಗೆ ಬಂದಿಳಿದಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ವಿಶೇಷ ವಿನ್ಯಾಸದ ಒಳ ಉಡುಪಿನಲ್ಲಿ ಚಿನ್ನವನ್ನು ಪುಡಿ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿತನಿಂದ 920 ಗ್ರಾಂ ತೂಕದ 43,88,400 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details