ಮಂಗಳೂರು: ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಪರ್ಸ್ನಲ್ಲಿ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ ಅಧಿಕಾರಿಗಳು, ಮಹಿಳೆ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಫಾತಿಮ ಕೊಟ್ಟಚೇರಿ (47) ಮತ್ತು ಭಟ್ಕಳದ ಮುಹಮ್ಮದ್ ಮೊಯ್ದಿನ್ (50) ಬಂಧಿತರು. ವಿದೇಶದಿಂದ ಬಂದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವುದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ.
ಸ್ಯಾನಿಟರಿ ನ್ಯಾಪ್ಕಿನ್ನಲ್ಲಿ ಚಿನ್ನ ಸಾಗಾಟ ಓದಿ:ಹೆಂಡ್ತಿ ಅಕ್ಕನ ಮೇಲಿನ ಆಸೆಗೆ ಆಕೆಯ ಗಂಡನ ಕೊಂದ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಸ್ಯಾನಿಟರಿ ನ್ಯಾಪ್ಕಿನ್ನಲ್ಲಿ 1ಕೆಜಿ 103 ಗ್ರಾಂ ಚಿನ್ನ ಮತ್ತು ಪರ್ಸ್ನಲ್ಲಿ 404 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ಇವರು ತಂದಿದ್ದರು. ಇದರ ಮೌಲ್ಯ 53 ಲಕ್ಷ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.