ಮಂಗಳೂರು:ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ ಕಳ್ಳರು ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಉಪ್ಪಿನಂಗಡಿ ಜ್ಯುವೆಲ್ಲರಿಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಕಳವು - ಕಳ್ಳರು
ಉಪ್ಪಿನಂಗಡಿಯ ಆರ್.ಕೆ ಜ್ಯುವೆಲ್ಲರಿಯಲ್ಲಿ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದು, 300 ಗ್ರಾಂ ಗಳಿಗೂ ಅಧಿಕ ಪ್ರಮಾಣದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆಂದು ಅಂದಾಜಿಸಲಾಗಿದೆ.
ಆರ್.ಕೆ ಜ್ಯುವೆಲ್ಲರಿ
ಉಪ್ಪಿನಂಗಡಿಯ ಆರ್.ಕೆ ಜ್ಯುವೆಲ್ಲರಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಮೂರು ಗಂಟೆಯ ವೇಳೆಗೆ ಶಟರ್ ಮುರಿದು ಒಳಹೊಕ್ಕ ಕಳ್ಳರು ಮಳಿಗೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. 300 ಗ್ರಾಂ ಗಳಿಗೂ ಅಧಿಕ ಪ್ರಮಾಣದ ಚಿನ್ನಾಭರಣ ಕಳವು ಆಗಿರಬಹುದೆಂದು ಅಂದಾಜಿಸಲಾಗಿದೆ.
ಕಳವು ಮಾಹಿತಿ ಬರುತ್ತಿದ್ದಂತೆ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.