ಕರ್ನಾಟಕ

karnataka

ETV Bharat / state

ಆಟಿಕೆಯಲ್ಲಿಟ್ಟು ಚಿನ್ನ ಅಕ್ರಮ ಸಾಗಣೆ: ಮಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಖದೀಮ - accused arrested in Mangaluru airport

ಮಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಟ್ರ್ಯಾಲಿ ಬ್ಯಾಗ್​​ನ ಚಕ್ರದಲ್ಲಿ ಹಾಗು ಆಟಿಕೆಯಲ್ಲಿ ಚಿನ್ನವನ್ನು ಇಟ್ಟು ಕಳ್ಳಸಾಗಣೆ ಮಾಡುತ್ತಿದ್ದುದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರೋಪಿ ಬಳಿಯಿದ್ದ 19,01,460  ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

gold smugling through  trally bag wheels
ಟ್ರಾಲಿ ಬ್ಯಾಗ್​ನ ಚಕ್ರದಲ್ಲಿ ಚಿನ್ನ ಸಾಗಾಟ

By

Published : Feb 20, 2021, 10:15 AM IST

ಮಂಗಳೂರು: ಟ್ರಾಲಿ ಬ್ಯಾಗ್ ನ ಚಕ್ರ ಮತ್ತು ಆಟಿಕೆಯ ಮೋಟಾರ್ ಪ್ಲೇಟ್ ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಟ್ರಾಲಿ ಬ್ಯಾಗ್​ನ ಚಕ್ರದಲ್ಲಿ ಚಿನ್ನ ಅಕ್ರಮ ಸಾಗಣೆ

ದುಬೈನಿಂದ ಮಂಗಳೂರಿಗೆ ಶುಕ್ರವಾರ ಬಂದ ಕಾಸರಗೋಡಿನ ಶೇಕ್ ಹನೀಫ್ (26) ಎಂಬಾತ ಈ ರೀತಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿರುವ ಆರೋಪಿ. ಈತನನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಟ್ರಾಲಿ ಬ್ಯಾಗ್​ನ ಚಕ್ರದಲ್ಲಿ ಮತ್ತು ವ್ಯಾಕ್ಯುಮ್ ಕ್ಲೀನರ್ ಆಟಿಕೆಯ ಮೋಟಾರ್ ಪ್ಲೇಟ್​ನಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಈತನಿಂದ ರೂ 19,01,460 ಮೌಲ್ಯದ 402 ಗ್ರಾಂ‌ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈತನನ್ನು ಬಂಧಿಸಿರುವ ಮಂಗಳೂರು ಕಸ್ಟಮ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಆಟಿಕೆಯಲ್ಲಿ ಚಿನ್ನ ಸಾಗಾಟ

ಇದನ್ನೂ ಓದಿ:12ನೇ ದಿನವೂ ಇಂಧನ ಬೆಲೆ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ ದರ ಎಷ್ಟು ಗೊತ್ತೆ?

ABOUT THE AUTHOR

...view details