ಮಂಗಳೂರು: ದುಬೈಯಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಎಮರ್ಜನ್ಸಿ ಲೈಟ್ವೊಳಗೆ ಅಕ್ರಮ ಚಿನ್ನ ಸಾಗಾಟ: 9.39 ಲಕ್ಷ ರೂ. ಮೌಲ್ಯದ ಬಂಗಾರ ವಶ - Gold smuggling
ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ, ಆತನನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
![ಎಮರ್ಜನ್ಸಿ ಲೈಟ್ವೊಳಗೆ ಅಕ್ರಮ ಚಿನ್ನ ಸಾಗಾಟ: 9.39 ಲಕ್ಷ ರೂ. ಮೌಲ್ಯದ ಬಂಗಾರ ವಶ Gold smuggling](https://etvbharatimages.akamaized.net/etvbharat/prod-images/768-512-6061012-thumbnail-3x2-mgn.jpg)
ಮಂಗಳೂರು ಏರ್ ಪೋರ್ಟ್ನಲ್ಲಿ ಅಕ್ರಮ ಚಿನ್ನ ಸಾಗಾಟ
ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕ ಕಾಸರಗೋಡಿನ ಮೊಹಮ್ಮದ್ ಮಹೀರ್ ಪಟ್ಲ ಎಂಬಾತನಿಂದ ರೂ. 9.39 ಲಕ್ಷ ಮೌಲ್ಯದ 233.18 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ರೀಚಾರ್ಜೇಬಲ್ ಎಮರ್ಜೆನ್ಸಿ ಲೈಟ್ ಮತ್ತು ಸೋಲಾರ್ ಸೆನ್ಸಾರ್ ವಾಲ್ ಲೈಟ್ನ ಒಳಗೆ ಚಿನ್ನವನ್ನು ಅಡಗಿಸಿಟ್ಟು, ಈತ ಅಕ್ರಮವಾಗಿ ಸಾಗಾಟ ಮಾಡಿದ್ದ. ಪ್ರಯಾಣಿಕನಿಂದ ಚಿನ್ನ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿದ್ದಾರೆ.