ಕರ್ನಾಟಕ

karnataka

ETV Bharat / state

ಕಡಬ: ಚಿನ್ನದಂಗಡಿ ಉದ್ಘಾಟನೆ ದಿನವೇ ಮಾಲೀಕ ಅಪಘಾತದಲ್ಲಿ ಸಾವು

ಚಿನ್ನದ ಅಂಗಡಿ ಆರಂಭಿಸಬೇಕಿದ್ದ ದಿನವೇ ಮಾಲೀಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಸಮೀಪ ನಡೆದಿದೆ.

By

Published : Jun 22, 2023, 9:15 PM IST

owner died in an accident
ಚಿನ್ನದ ಅಂಗಡಿ ಉದ್ಘಾಟನೆಯ ದಿನವೇ ಮಾಲೀಕ ಅಪಘಾತದಲ್ಲಿ ಸಾವು

ಕಡಬ (ದಕ್ಷಿಣ ಕನ್ನಡ): ಚಿನ್ನದಂಗಡಿ ಉದ್ಘಾಟನೆ ಮಾಡಬೇಕಿದ್ದ ದಿನವೇ ಮಾಲೀಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿ ಸಂಭವಿಸಿದೆ. ಮೃತರನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಇವರ ಮಾಲೀಕತ್ವದಲ್ಲಿ ಮರ್ದಾಳ‌‌ದಲ್ಲಿ ಜೂ.22ರಂದು ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ಶುಭಾರಂಭಕ್ಕೆ ತಯಾರಿ ನಡೆದಿತ್ತು.

ಜೂ.21ರಂದು ಆಹ್ವಾನ ಪತ್ರ ಕೊಡಲು ಬೆಳ್ತಂಗಡಿ ಕಡೆ ಹೋಗಿ ಬರುವುದಾಗಿ ಮನೆಯವರು, ಗೆಳೆಯರಿಗೆ ತಿಳಿಸಿದ್ದರು. ಸಂಜೆಯಾದರೂ ಮನೆಗೆ ಬಾರದ ಕಾರಣ ಅವರ ಮೊಬೈಲ್​ಗೆ ಕರೆ ಮಾಡುತ್ತಿದ್ದರು. ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಮೊಬೈಲ್ ರಾತ್ರಿ 10 ಗಂಟೆಯವರೆಗೆ ರಿಂಗ್ ಆಗುತ್ತಿತ್ತು. ಬಳಿಕ ಸ್ವಿಚ್ ಆಫ್ ಬರುತ್ತಿತ್ತು ಎನ್ನಲಾಗಿದೆ. ಅನುಮಾನಗೊಂಡ ಮನೆಯವರು ಜೂ.21ರ ರಾತ್ರಿಯೇ ಕಡಬ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.

ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೂ.22ರ ಬೆಳಿಗ್ಗೆ ಬೈಕ್‌ ಗುಂಡ್ಯ ಎಂಬಲ್ಲಿ ಹೆದ್ದಾರಿಯಲ್ಲಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಅನುಮಾನಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಕಂದಕದಲ್ಲಿ ಮೃತಪಟ್ಟ ರೀತಿಯಲ್ಲಿ ಬಿದ್ದಿರುವುದನ್ನು ಕಂಡು ದೇಹವನ್ನು ಮೇಲಕ್ಕೆತ್ತಿದ್ದಾರೆ. ಅದು ನಾಗಪ್ರಸಾದ್‌ ಅವರ ಮೃತದೇಹವಾಗಿತ್ತು. ಕಡಬ ಠಾಣೆ ಪೊಲೀಸರು ಮತ್ತು ಸಕಲೇಶಪುರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ:Bengaluru crime: ಮಾಜಿ ಸಿಎಂ ನಿವಾಸದ ಬಳಿ ಅಪಾರ್ಟ್ ಮೆಂಟ್​ನ ಸೆಕ್ಯೂರಿಟಿ ಗಾರ್ಡ್​ ಸಿಬ್ಬಂದಿ ಮೇಲೆ ಹಲ್ಲೆ‌ ಕೇಸ್​.. ಆರೋಪಿ ಬಂಧನ

ಪೊಲೀಸರು ಹೇಳಿದ್ದೇನು?:ಪ್ರಕರಣದ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು 'ಈಟಿವಿ ಭಾರತ' ಜೊತೆಗೆ ಮಾತನಾಡಿ, ''ಯುವಕನ ಸಾವು ಮೇಲ್ನೋಟಕ್ಕೆ ಬೈಕ್ ಅಪಘಾತದಿಂದಲೇ ಆಗಿರುವ ರೀತಿ ಕಾಣುತ್ತಿದೆ. 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಮನೆಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟಿರುವ ವ್ಯಕ್ತಿಯ ಮೊಬೈಲ್ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿದ್ದೇವೆ. ಬೆಳ್ತಂಗಡಿ ಕಡೆಗೆ ಹೊಗುತ್ತಿದ್ದೇನೆ ಎಂದು ಹೇಳಿದ್ದ ವ್ಯಕ್ತಿ, ಈ ಕಡೆಗೆ ಯಾಕೆ ಬಂದಿದ್ದಾನೆ? ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಮೊಬೈಲ್ ದೊರೆತ ಮೇಲೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ'' ಎಂದು ಹೇಳಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Chamarajanagar crime: ಬಸ್​​ ನಿಲ್ದಾಣದಲ್ಲಿ ಹುಡುಗಿ ಪಕ್ಕ ನಿಂತಿದ್ದ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ!

ಯುವಕನ ಹತ್ಯೆಗೈದ ಸ್ನೇಹಿತರ ಅರೆಸ್ಟ್:ಕುಂಟ ಎಂದು ವ್ಯಂಗ್ಯವಾಗಿ ಬೈದಿದ್ದಕ್ಕೆ ಯುವಕನನ್ನು ಕರೆದೊಯ್ದು ಸ್ನೇಹಿತರೇ ಹಾಲೋಬ್ಲಾಕ್‌‌ ಕಲ್ಲು ಎಸೆದೆ ಕೊಲೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಚಾಮುಂಡೇಶ್ವರಿ ಬಾರ್ ಹತ್ತಿರವಿರುವ ನಿನ್ನೆ ರಾತ್ರಿ ವಿಜಯ್ ಕುಮಾರ್ ಎಂಬಾತನ ಹತ್ಯೆ ಮಾಡಲಾಗಿದೆ. ಬಾರ್ ಕ್ಯಾಷಿಯರ್ ಲಕ್ಷಣ್ಣಗೌಡ ಎಂಬವರು ನೀಡಿದ ದೂರಿನ‌ ಅನ್ವಯ ಹತ್ಯೆಗೊಳಗಾದ ವಿಜಯ್ ಸ್ನೇಹಿತರಾಗಿದ್ದ ಗಿರೀಶ್ ಮತ್ತು ಲೋಕೇಶ್ ಎಂಬವರ ಮೇಲೆ ದೂರು ದಾಖಲಿಸಿಕೊಂಡು ಬಂಧಿಸಲಾಗಿದೆ.

ಇದನ್ನೂ ಓದಿ:ಭೀಮಾತೀರದ ಹಂತಕನ ಹತ್ಯೆಗೆ ಯತ್ನಿಸಿದ್ದ ಪ್ರಮುಖ ಆರೋಪಿಗೆ ಷರತ್ತುಬದ್ಧ ಜಾಮೀನು

ABOUT THE AUTHOR

...view details