ಕರ್ನಾಟಕ

karnataka

ETV Bharat / state

ಒಳಉಡುಪಿನಲ್ಲಿ ಮರೆಮಾಚಿ 39 ಲಕ್ಷ ಮೌಲ್ಯದ ಚಿನ್ನ ಸಾಗಾಟ: ಮಹಿಳೆ ಬಂಧನ - ಮಂಗಳೂರು ವಿಮಾನ ನಿಲ್ದಾಣ

ಒಳಉಡುಪಿನಲ್ಲಿ ಮರೆಮಾಚಿ 39.48 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ.

Mangaluru Airport
ಚಿನ್ನ ಸಾಗಾಟ

By

Published : Mar 28, 2021, 12:49 PM IST

ಮಂಗಳೂರು: ಮಹಿಳೆಯೊಬ್ಬಳು ಒಳಉಡುಪಿನಲ್ಲಿ ಬಚ್ಚಿಟ್ಟು 39.48 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕಾಸರಗೋಡು ಜಿಲ್ಲೆಯ ಚೇರೂರು ಗ್ರಾಮದ ಫೌಸಿಯಾ ಮಿಸ್ರಿಯಾ ಮೊಯ್ದೀನ್ ಕುಂಞಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿ.

ಇದನ್ನು ಓದಿ: ಮಂಗಳೂರು : ದರೋಡೆ ನಾಟಕವಾಡಿ ಸಿಕ್ಕಿಬಿದ್ದ ಹವಾಲ ದಂಧೆಕೋರರು

ಆರೋಪಿ ಫೌಸಿಯಾ ಮಿಸ್ರಿಯಾ ಮೊಯ್ದೀನ್ ಕುಂಞಿ ತನ್ನ ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ಏರ್ ಇಂಡಿಯಾ ವಿಮಾನದ ಮೂಲಕ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು‌‌. ಈ ಸಂದರ್ಭ ಕಸ್ಟಮ್ ಅಧಿಕಾರಿಗಳು ಅವರನ್ನು ಪರಿಶೀಲನೆ ನಡೆಸಿದಾಗ ಆಕೆಯ ಒಳ ಉಡುಪಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಕಸ್ಟಮ್ ಅಧಿಕಾರಿಗಳು ತಕ್ಷಣ ಆಕೆಯನ್ನು ಬಂಧಿಸಿ 851 ಗ್ರಾಂ ತೂಕದ 39.48 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details