ಕರ್ನಾಟಕ

karnataka

ETV Bharat / state

ಮಂಗಳೂರು: ಉತ್ಖನನದ ವೇಳೆ ಪುರಾತನ ದೈವದ ಪರಿಕರ ಪತ್ತೆ - Sri Kordabbu Parivara daivasthana

ಗುರುಪುರ ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನ ಬಳಿ ಉತ್ಖನನ ಮಾಡುವ ವೇಳೆ ಹಳೆಯ ಕೋರ್ದಬ್ಬು ದೈವದ ಮೂರ್ತಿ, ಖಡ್ಸಲೆ, ಗೋಣ, ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ದೀಪ ಪತ್ತೆಯಾಗಿವೆ.

God-idol
ದೈವದ ಮೂರ್ತಿ ಪರಿಕರ

By

Published : Jun 17, 2021, 4:13 PM IST

ಮಂಗಳೂರು: ಇಲ್ಲಿನ ಗುರುಪುರದಲ್ಲಿ ಉತ್ಖನನ ಮಾಡುವ ಸಂದರ್ಭದಲ್ಲಿ ವಿಸ್ಮಯವೊಂದು ಕಂಡುಬಂದಿದೆ. 3 ಶತಮಾನಗಳಷ್ಟು ಪುರಾತನ ಎನ್ನಲಾದ ದೈವದ ಮೂರ್ತಿ ಮತ್ತು ಪರಿಕರಗಳು ಪತ್ತೆಯಾಗಿದ್ದು ಅಚ್ಚರಿ ಎನಿಸಿದೆ.

ದೈವಕ್ಕೆ ಸಂಬಂಧಿಸಿರುವುದು ಎನ್ನಲಾದ ಗಂಟೆ ಪತ್ತೆಯಾಗಿದೆ

ಗುರುಪುರ ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನ ಬಳಿ ಉತ್ಖನನ ಮಾಡುವ ವೇಳೆ ಈ ಪರಿಕರಗಳು ಪತ್ತೆಯಾಗಿದೆ. ಇತ್ತೀಚಿಗೆ ತಾಂಬೂಲ ಪ್ರಶ್ನೆ ಇಡುವ ವೇಳೆಯಲ್ಲಿ ಶಶಿಕುಮಾರ್ ಪಂಡಿತ್ ಅವರು ಹಳೆ ದೈವಸ್ಥಾನದ ಜಾಗದಲ್ಲಿ ದೈವದ ಸೊತ್ತುಗಳು ಇವೆ ಎಂದು ಸೂಚನೆ ನೀಡಿದ್ದರು. ಇವರ ಸೂಚನೆಯಂತೆ ಉತ್ಖನನ ಮಾಡಿದಾಗ ಹಳೆಯ ಕೋರ್ದಬ್ಬು ದೈವದ ಮೂರ್ತಿ, ಖಡ್ಸಲೆ, ಗೋಣ, ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ದೀಪ ಪತ್ತೆಯಾಗಿವೆ.

3 ಶತಮಾನಗಳಷ್ಟು ಹಳೆಯದೆನ್ನಲಾದ ದೈವದ ಪರಿಕರ ಪತ್ತೆಯಾಗಿರುವುದು

ದೀಪ ಮಣ್ಣಿನದಾಗಿದ್ದು, ಉಳಿದವುಗಳು ಪಂಚಲೋಹ, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ. ಉತ್ಖನನ ವೇಳೆ ಪತ್ತೆಯಾದ ದೈವದ ಮೂರ್ತಿ ಮತ್ತು ಪರಿಕರಗಳು 3 ಶತಮಾನದಷ್ಟು ಹಳೆಯದಾಗಿರಬಹುದೆಂದು ಅಂದಾಜಿಸಲಾಗಿದೆ.

ಉತ್ಖನನದ ವೇಳೆ ಪತ್ತೆಯಾದ ದೈವದ ಪರಿಕರ

ಓದಿ:ರಾಜ್ಯದಲ್ಲಿ ಇನ್ನೂ 2 ದಿನ ಭಾರಿ ಮಳೆ: ಇಂದು, ನಾಳೆಗೆ ಆರೆಂಜ್ ಅಲರ್ಟ್

ABOUT THE AUTHOR

...view details