ಕರ್ನಾಟಕ

karnataka

ETV Bharat / state

ಗ್ಲಾಸ್ ಕ್ಯಾಬಿನ್, ಪಿಪಿಇ ಕಿಟ್.. ಕೊರೊನಾ ಬಾರದಂತೆ ಪೊಲೀಸ್ ಠಾಣೆಗೇ ಕಾವಲು - Corona Virus Update

ನಿಯಮ ಪ್ರಕಾರ ಶೇ.30ರಷ್ಟು ಸಿಬ್ಬಂದಿ (ಸೆಂಟ್ರಿ, ಎಸ್​​ಹೆಚ್​​ಒ, ರೈಟರ್, ಕಂಪ್ಯೂಟರ್ ಸಿಬ್ಬಂದಿ, ತನಿಖೆಗೆ ಸಹಾಯಕರೊಬ್ಬರು) ಮಾತ್ರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಔಟ್ ಡೋರ್ ಕರ್ತವ್ಯ ನಿರ್ವಹಿಸುವವರು ಠಾಣೆಗೆ ಬರುವಂತಿಲ್ಲ..

Bantwal City Police Station
ಬಂಟ್ಬಾಳ ನಗರ ಪೊಲೀಸ್​ ಠಾಣೆ

By

Published : Jul 22, 2020, 5:57 PM IST

ಬಂಟ್ವಾಳ (ದಕ್ಷಿಣ ಕನ್ನಡ) :ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೀಗಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​​ಒಪಿ) ಜಾರಿಗೆ ತರಲಾಗಿದೆ. ಹೀಗಾಗಿ, ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಪ್ರತಿ ಪೊಲೀಸ್​​ ಠಾಣೆಯಲ್ಲಿ ಗ್ಲಾಸ್​​​ ಕ್ಯಾಬಿನ್​​​ ಅಳವಡಿಸಬೇಕು. ಠಾಣೆಯಲ್ಲಿ ಐವರು ಸಿಬ್ಬಂದಿಯಷ್ಟೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

ಸ್ಯಾನಿಟೈಸರ್​​ ಸ್ಪ್ರೇ ಮಾಡಲು ಹ್ಯಾಂಡ್ ಆಪರೇಟರ್ ಪಂಪ್ ಬಳಸಬೇಕು. ಆರೋಪಿಗಳ ಬಂಧನಕ್ಕೆ ರಚಿಸಿದ ತಂಡ ಮತ್ತು ಆರೋಪಿಗಳು ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್​​​ ಧರಿಸಬೇಕು. ಗ್ಲೌಸ್ ಹಾಕಿರಬೇಕು ಎಂದು ಸೂಚಿಸಲಾಗಿದೆ. ಫೇಸ್​​​ಮಾಸ್ಕ್​​​ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರೊಂದಿಗೆ ವ್ಯವಹರಿಸಬೇಕು.

ಬಂಟ್ವಾಳ ನಗರ ಪೊಲೀಸ್​​ ಠಾಣೆ ಎಸ್ಐ ಅವಿನಾಶ್ ಗೌಡ

ನಿಯಮ ಪ್ರಕಾರ ಶೇ.30ರಷ್ಟು ಸಿಬ್ಬಂದಿ (ಸೆಂಟ್ರಿ, ಎಸ್​​ಹೆಚ್​​ಒ, ರೈಟರ್, ಕಂಪ್ಯೂಟರ್ ಸಿಬ್ಬಂದಿ, ತನಿಖೆಗೆ ಸಹಾಯಕರೊಬ್ಬರು) ಮಾತ್ರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಔಟ್ ಡೋರ್ ಕರ್ತವ್ಯ ನಿರ್ವಹಿಸುವವರು ಠಾಣೆಗೆ ಬರುವಂತಿಲ್ಲ. ಹೀಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ.

ಈ ಎಲ್ಲ ಸೂಚನೆಗಳನ್ನು ಮೇಲಧಿಕಾರಿಗಳ ಆದೇಶದ ಮೇಲೆ ಪಾಲಿಸುತ್ತಿದ್ದೇವೆ ಎಂದು ಬಂಟ್ವಾಳ ನಗರ ಪೊಲೀಸ್​​ ಠಾಣೆ ಎಸ್ಐ ಅವಿನಾಶ್ ಗೌಡ ಹೇಳಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಸ್​​​ಒಪಿ ಜಾರಿ ಮಾಡಲಾಗಿದೆ.

ABOUT THE AUTHOR

...view details