ಸುಳ್ಯ: ನೆಲ್ಯಾಡಿ ಸಮೀಪದ ಪೆರಿಯಶಾಂತಿಯಿಂದ ಇಚಿಲಂಪಾಡಿವರೆಗಿನ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಿಡಿಗೇಡಿಗಳು ಕಸ, ತ್ಯಾಜ ತಂದು ಹಾಕುತ್ತಿದ್ದಾರೆ. ಇವರ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿದವರಿಗೆ ನೀತಿ ಟ್ರಸ್ಟ್ ಸಾಮಾಜಿಕ ಸಂಘಟನೆ 2 ಸಾವಿರ ರೂ. ನಗದು ಬಹುಮಾನ ಘೋಷಿಸಿದೆ.
ಈ ರಸ್ತೆಯಲ್ಲಿ ಕಸ ಬಿಸಾಡುವವರ ಮಾಹಿತಿ ನೀಡಿದ್ರೆ 2 ಸಾವಿರ ರೂ. ಬಹುಮಾನ: ವಿನೂತನ ಅಭಿಯಾನ - ಕಸ ಹಾಕುವವರ ಮಾಹಿತಿ ನೀಡಿದ್ರೆ 2 ಸಾವಿರ ರೂ. ಬಹುಮಾನ
ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಸ, ತ್ಯಾಜ್ಯ ಎಸೆಯುವವರ ಮಾಹಿತಿ ನೀಡಿದರೆ 2 ಸಾವಿರ ರೂ. ಬಹುಮಾನ ನೀಡುವುದಾಗಿ ನೀತಿ ಟ್ರಸ್ಟ್ ಸಾಮಾಜಿಕ ಸಂಘಟನೆ ಘೋಷಿಸಿದೆ.

ನೀತಿ ತಂಡದ ಅಧ್ಯಕ್ಷ ಜಯನ್ ಟಿ ಈ ಬಹುಮಾನ ಘೋಷಣೆ ಮಾಡಿದ್ದು, ಸಾರ್ವಜನಿಕರು ಸಂಚರಿಸುವ ರಸ್ತೆಯನ್ನು ತ್ಯಾಜ್ಯ ಮುಕ್ತವನ್ನಾಗಿಸುವುದು ಬಹುಮಾನದ ಹಿಂದಿನ ಉದ್ದೇಶವಾಗಿದೆ ಎಂದಿದ್ದಾರೆ. ಸಾರ್ವಜನಿಕರು ಕಸ ಎಸೆಯುವವರ ಫೋಟೋ, ವಿಡಿಯೋ ಅಥವಾ ಪೂರಕ ದಾಖಲೆ ನೀಡಿ ಬಹುಮಾನ ಪಡೆಯಬಹುದಾಗಿದೆ. ಗ್ರಾ.ಪಂಗಳು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರೂ ಜನ ಮಾತ್ರ ಜಾಗೃತರಾಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರ ಮಾಲಿನ್ಯ ಮತ್ತು ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುತ್ತಿದ್ದಾರೆ ಎಂದು ಜಯನ್ ತಿಳಿಸಿದ್ದಾರೆ.
ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯ ಪರಿಸರ ದುರ್ನಾತ ಬೀರುತ್ತಿದೆ. ಈ ಭಾಗದಲ್ಲಿ ಸಂಚರಿಸುವ ಪ್ರವಾಸಿಗರು, ವಾಹನ ಸವಾರರು ನಿತ್ಯವೂ ದುರ್ನಾತವನ್ನು ಸಹಿಸಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ನದಿ ನೀರಿಗೂ ತ್ಯಾಜ್ಯ ತಂದು ಸುರಿಯುತ್ತಿದ್ದು, ಮಂಗಳೂರಿನ ಜನರು ಇದೇ ನೀರನ್ನು ಕುಡಿಯಬೇಕಿದೆ ಎಂದು ಜಯನ್ ಬೇಸರ ವ್ಯಕ್ತಪಡಿಸಿದ್ದಾರೆ.