ಕರ್ನಾಟಕ

karnataka

By

Published : May 19, 2023, 5:20 PM IST

ETV Bharat / state

ಬಿ.ಕೆ.ಹರಿಪ್ರಸಾದ್​ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕೊಡಿ: ಕಾಂಗ್ರೆಸ್ ಹೈಕಮಾಂಡ್​ಗೆ ಅಭಯಚಂದ್ರ ಜೈನ್ ಒತ್ತಾಯ

''ಬಿ.ಕೆ.ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳಿವಳಿಕೆಯುಳ್ಳವರು. ಛಲದಂಕ ಮಲ್ಲ. ಅವರು ಉಸ್ತುವಾರಿ ಮಂತ್ರಿಯಾದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವನ ಸ್ಥಾನ ಕೊಟ್ಟಲ್ಲಿ ಜನತೆ ಸಾಮರಸ್ಯದ ಜೀವನ ನಡೆಸಬಹುದು'' ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

Abhayachandra Jain
ಮಾಜಿ ಸಚಿವ ಅಭಯಚಂದ್ರ ಜೈನ್

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು.

ಮಂಗಳೂರು:''ದ.ಕ.ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಉಳಿಯಬೇಕಾದಲ್ಲಿ ಅಭಿವೃದ್ಧಿಪರ ಕೆಲಸ ಆಗಬೇಕಿದ್ದರೆ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ ಬಿ.ಕೆ.ಹರಿಪ್ರಸಾದ್ ಅವರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ'' ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಕಾಂಗ್ರೆಸ್ ಹೈಕಮಾಂಡ್​ಗೆ ಒತ್ತಾಯಿಸಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ‌. ಜಿಲ್ಲಾ ಕಾಂಗ್ರೆಸ್ ‌ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್​ನಲ್ಲಿ ನಾಯಕತ್ವದ ಕೊರತೆಯಿದೆ. ಜಿಲ್ಲೆಯಲ್ಲಿ ಮತ್ತೊಮ್ಮೆ ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡೀಸ್, ಜನಾರ್ದನ ಪೂಜಾರಿಯವರಂತಹ ಬಲಿಷ್ಠ ನಾಯಕರ ಅಗತ್ಯವಿದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಅವರಿಗೆ ರಾಜ್ಯ ಗೃಹ ಸಚಿವರನ್ನಾಗಿ ಮಾಡಿ, ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು'' ಎಂದು ಆಗ್ರಹಿಸಿದರು.

''ಬಿ.ಕೆ.ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳಿವಳಿಕೆಯುಳ್ಳವರು. ಅವರು ಛಲದಂಕ ಮಲ್ಲ. ಅವರು ಉಸ್ತುವಾರಿ ಮಂತ್ರಿಯಾದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವನ ಸ್ಥಾನ ಕೊಟ್ಟಲ್ಲಿ ಜನತೆ ಸಾಮರಸ್ಯದ ಜೀವನ ನಡೆಸಬಹುದು'' ಎಂದರು.

ಇದನ್ನು ಓದಿ:ಸಿದ್ದರಾಮಯ್ಯ-ಡಿಕೆಶಿ ಪದಗ್ರಹಣ ಸಮಾರಂಭಕ್ಕೆ ದೀದಿ ಬರಲ್ಲ, ಪ್ರತಿನಿಧಿ ಭಾಗಿ

ಯು.ಟಿ.ಖಾದರ್​ಗೂ ಒಳ್ಳೆಯ ಮಂತ್ರಿ ಸ್ಥಾನ ದೊರಕಲಿ:ಕಳೆದ ವಿಧಾನಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ಉಪ ನಾಯಕರಾಗಿದ್ದ ಯು ಟಿಖಾದರ್ ಅವರಿಗೆ ಉಸ್ತುವಾರಿ ಸ್ಥಾನ ನೀಡಿದ್ದಲ್ಲಿ ಈ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲವೇ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಯು.ಟಿ.ಖಾದರ್ ಅವರಿಗೂ ಒಳ್ಳೆಯ ಮಂತ್ರಿ ಸ್ಥಾನ ದೊರಕಬೇಕು. ಆದರೆ, ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಅವರಲ್ಲಿ ಡ್ಯಾಶಿಂಗ್ ಸ್ವಭಾವವಿಲ್ಲ. ಅಲ್ಲದೇ ಖಾದರ್ ಮೇಲೆ ಕೋಮು ಭಾವನೆಯನ್ನು ಹೊರಿಸಿ ಅವರನ್ನು ಸ್ತಬ್ಧ ಮಾಡಲಾಗುತ್ತದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಅವರಿಗೆ ದ.ಕ. ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ದೊರಕಬೇಕು‌'' ಎಂದು ಮಾಜಿ ಸಚಿವ ಅಭಯಚಂದ್ರ ಜೈನ್​ ಆಗ್ರಹಿಸಿದರು.

ಅಭಯಚಂದ್ರ ಜೈನ್ ಕಿಡಿ:''ಪುತ್ತೂರು ಬಿಜೆಪಿ ಕಾರ್ಯಕರ್ತನ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲು ಅವರುಗಳೇ ನೇರ ಕಾರಣರಾಗಿದ್ದಾರೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಇದೇ ವೇಳೆ ಕಿಡಿಕಾರಿದರು. ನೂತನ ಸರಕಾರ ಇನ್ನಷ್ಟೇ ಅಧಿಕಾರಕ್ಕೆ ಬರಬೇಕು. ಸಿದ್ಧರಾಮಯ್ಯ ಅವರು ನಾಳೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನಾಳೆ ಪ್ರಮಾಣವಚನ ಸ್ವೀಕಾರ ಆಗುವವರೆಗೂಸರಕಾರದ ಜವಾಬ್ದಾರಿ ಇನ್ನೂ ಬಸವರಾಜ ಬೊಮ್ಮಾಯಿ ಅವರ ಮೇಲೆಯೇ ಇದೆ. ಆದರೆ ಈ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಕಲ್ಲಡ್ಕ ಭಟ್ ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸುತ್ತಿದ್ದಾರೆ. ಅಂದರೆ, ಅವರಿಗೆ ಮಾನವೀಯತೆ ಇದೆಯೇ'' ಎಂದು ಅಭಯಚಂದ್ರ ಜೈನ್ ಇದೇ ವೇಳೆ ಪ್ರಶ್ನಿಸಿದರು.

ಇದನ್ನೂಓದಿ:ಸಿಎಂ ಪದಗ್ರಹಣ: ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ

ABOUT THE AUTHOR

...view details