ಮಂಗಳೂರು:ಮಕ್ಕಳ ಜೊತೆ ಜಗಳವಾಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮುನಿಸಿಕೊಂಡ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆಯ ಮೂಡುಮಾರ್ನಾಡಿನಲ್ಲಿ ನಡೆದಿದೆ.
ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು.. ಮುನಿಸಿಕೊಂಡ ಬಾಲಕಿ ನೇಣಿಗೆ ಶರಣು - ಬುದ್ಧಿವಾದಕ್ಕೆ ಮುನಿಸಿಕೊಂಡ ಬಾಲಕಿ
ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಅವರ ಅಕ್ಕ ಸುಚಿತ್ರಾ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ಪೂಜಾ ಮನೆ ಬಳಿಯ ಹಾಡಿಯಲ್ಲಿರುವ ಮರದ ಕೊಂಬೆಗೆ ಚೂಡಿದಾರದ ವೇಲ್‌ನಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ನೇಣಿಗೆ ಶರಣು
ಮೂಡುಮಾರ್ನಾಡು ಗುಡ್ಡಮೇಲು ಎಂಬಲ್ಲಿನ ಕರುಣಾಕರ ಹಾಗೂ ಸುಶೀಲಾ ದಂಪತಿಯ 13 ವರ್ಷದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಾಕೆ. ಇಂದು ಮಧ್ಯಾಹ್ನ ತಮ್ಮ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಕೀಟಲೆ ಮಾಡುತ್ತಿದ್ದ ಮಗಳಿಗೆ ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಅವರ ಅಕ್ಕ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ಬಾಲಕಿ ಮನೆ ಬಳಿಯ ಹಾಡಿಯಲ್ಲಿರುವ ಮರದ ಕೊಂಬೆಗೆ ಚೂಡಿದಾರ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.