ಮಂಗಳೂರು: ನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮತ್ತೊಂದು ಧರ್ಮದ ಯುವಕನೊಂದಿಗೆ ಸಂಬಂಧವಿದೆಯೆಂದು ಆಕೆಯ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳ ಫೋಟೋವನ್ನು ಆಕೆಯ ಇನ್ಸ್ಟಾಗ್ರಾಂ ಪೇಜ್ನಿಂದ ಕದ್ದು, ಅದನ್ನು ಅನ್ಯ ಧರ್ಮದ ಯುವಕನೊಂದಿಗೆ ಫೋಟೋ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು.
ಈ ಫೋಟೋವನ್ನು ಕೆಲವು ಸಾಮಾಜಿಕ ಜಾಲತಾಣದ ಹಲವಾರು ಪೇಜ್ಗಳಲ್ಲಿ ವೈರಲ್ ಮಾಡಲಾಗಿದೆ. ಈ ಎಡಿಟೆಡ್ ಫೋಟೋ ವಿದ್ಯಾರ್ಥಿನಿಗೂ ದೊರಕಿತ್ತು. ಇದೇ ವೇಳೆ ಯುವಕನೊಂದಿಗೆ ವಿದ್ಯಾರ್ಥಿನಿಯ ಕುಚಿಕು ಅನ್ನುವ ವಿಚಾರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಆನಂತರ ಫೋಟೋಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಅನ್ನುವುದು ಕುಟುಂಬಸ್ಥರಿಗೂ ಗೊತ್ತಾಗಿತ್ತು.
ಈ ಎಡಿಟೆಡ್ ಫೋಟೋ ವೈರಲ್ ಆಗುತ್ತಿದ್ದಂತೆ, ಅದರ ಪರ-ವಿರೋಧವೂ ಕೇಳಿಬಂದಿತ್ತು. ಇದೀಗ ವಿದ್ಯಾರ್ಥಿನಿ ಕುಟುಂಬಸ್ಥರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓದಿ:ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!