ಬಂಟ್ವಾಳ:ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಂಗಳೂರು ಶಾಸಕ ಯು.ಟಿ.ಖಾದರ್ ಬಂಟ್ವಾಳ ತಾಲೂಕಿಗೊಳಪಟ್ಟ ತನ್ನ ಕ್ಷೇತ್ರದ ಗ್ರಾಮಗಳ ಕಾರ್ಯಪಡೆಗಳ ಸಭೆಯನ್ನು ತಾಪಂ ಸಭಾಂಗಣದಲ್ಲಿ ನಡೆಸಿದರು.
ಎಲ್ಲರೂ ಲಸಿಕೆ ಪಡೆದುಕೊಳ್ಳಿ, ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ: ಶಾಸಕ ಯು.ಟಿ.ಖಾದರ್
ಕೊರೊನಾದಿಂದ ಯಾವುದೇ ಗ್ರಾಮದಲ್ಲೂ ಸಾವು ಸಂಭವಿಸದಂತೆ ಗರಿಷ್ಠ ಪ್ರಯತ್ನ ಮಾಡೋಣ. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಮೆಡಿಕಲ್ ಕಿಟ್ ಅನ್ನು ಟಾಸ್ಕ್ ಫೋರ್ಸ್ ಮುಖಾಂತರ ಮಾಡಿರಿ. ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಗುರುತು ಪತ್ತೆ ಮಾಡುವಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಅವರು, ಕೊರೊನಾದಿಂದ ಯಾವುದೇ ಗ್ರಾಮದಲ್ಲೂ ಸಾವು ಸಂಭವಿಸದಂತೆ ಗರಿಷ್ಠ ಪ್ರಯತ್ನ ಮಾಡೋಣ. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಮೆಡಿಕಲ್ ಕಿಟ್ ಅನ್ನು ಟಾಸ್ಕ್ ಫೋರ್ಸ್ ಮುಖಾಂತರ ಮಾಡಿರಿ. ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಗುರುತು ಪತ್ತೆ ಮಾಡುವಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳಿ. ಅನಾವಶ್ಯಕವಾಗಿ ಮನೆಯಿಂದ ಹೊರಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಟಾಸ್ಕ್ ಫೋರ್ಸ್ಗಿದೆ. ಇನ್ನು ಥಿಯರಿ ಸಾಕು, ಪ್ರಾಕ್ಟಿಕಲ್ ಆಗಿ ಕೆಲಸ ಮಾಡಿರಿ ಎಂದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸಹಾಯಕ ಕಮೀಷನರ್ ಮದನ್ ಮೋಹನ್, ತಾಪಂ ಇಒ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.