ಕರ್ನಾಟಕ

karnataka

ETV Bharat / state

ಮಂಗಳೂರು ನಗರದ ವಿವಿಧೆಡೆ ಗ್ಯಾಸ್ ವಾಸನೆ- ಕಾರಣ ನಿಗೂಢ - ಮಂಗಳೂರು ಸುದ್ದಿ

ಮಂಗಳೂರು ನಗರದ ವಿವಿಧೆಡೆ ಗ್ಯಾಸ್ ವಾಸನೆ ಕಂಡು ಬಂದಿದ್ದು, ಜನರು ಆತಂಕಗೊಂಡಿದ್ದಾರೆ.

Gas smell over Mangalore city, Mangalore news, Gas leak in Mangalore city, ಮಂಗಳೂರು ನಗರದ್ಯಾದಂತ ಗ್ಯಾಸ್​ ವಾಸನೆ, ಮಂಗಳೂರು ಸುದ್ದಿ, ಮಂಗಳೂರು ಗ್ಯಾಸ್​ ಸೋರಿಕೆ ಸುದ್ದಿ,
ಮಂಗಳೂರು ನಗರದ ವಿವಿಧೆಡೆ ಗ್ಯಾಸ್ ವಾಸನೆ

By

Published : Feb 18, 2022, 3:44 AM IST

ಮಂಗಳೂರು;ನಗರದಲ್ಲಿ ರಾತ್ರಿ ವೇಳೆಗೆ ಗ್ಯಾಸ್ ಲೀಕ್ ಆದ ವಾಸನೆ ಹರಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ನಗರದ ಕಾರ್ ಸ್ಟ್ರೀಟ್, ಹಂಪನಕಟ್ಟೆ, ಪಾಂಡೇಶ್ವರ, ಕುದ್ರೋಳಿ, ಕೊಟ್ಟಾರ , ಮಂದಾರಬೈಲ್, ಕೊಂಚಾಡಿ, ಕದ್ರಿ, ಬಿಜೈ ಮೊದಲಾದೆಡೆಗಳಲ್ಲಿ ಗ್ಯಾಸ್ ಲೀಕ್ ಆದ ವಾಸನೆ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಂಗಳೂರು ನಗರದ ವಿವಿಧೆಡೆ ಗ್ಯಾಸ್ ವಾಸನೆ

ಓದಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯ್ಸ್ ಆಫ್ ದಿ ಕಸ್ಟಮರ್ ಮಾನ್ಯತೆ

ರಾತ್ರಿ 10 ಗಂಟೆ ಸುಮಾರಿಗೆ ಗ್ಯಾಸ್ ಲೀಕ್ ಆದ ವಾಸನೆ ಹರಡಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಲವೆಡೆಗಳಲ್ಲಿ ಜನರು ತಮ್ಮ‌ ಮನೆಯಲ್ಲಿ ಗ್ಯಾಸ್ ಲೀಕ್ ಆಗಿದೆಯೆ ಎಂದು ಪರಿಶೀಲಿಸಿದ್ದಾರೆ. ನಗರದಲ್ಲಿ ಏಕಾಏಕಿ ಗ್ಯಾಸ್ ಲೀಕ್ ವಾಸನೆ‌ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಮಂಗಳೂರು ನಗರದ ವಿವಿಧೆಡೆ ಗ್ಯಾಸ್ ವಾಸನೆ

ABOUT THE AUTHOR

...view details