ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ತಪ್ಪಿದ ಭಾರಿ ಅನಾಹುತ - ಮಂಗಳೂರು ರಿಪೇರಿ ಶಾಪ್ ನಲ್ಲಿ ಸಿಲಿಂಡರ್ ಸ್ಪೋಟ ಸುದ್ದಿ

ನಗರದ ಜಪ್ಪು ಮಾರ್ಕೆಟ್ ಬಳಿ, ಸಿಲಿಂಡರ್ ರಿಪೇರಿ ಶಾಪ್ ನಲ್ಲಿ ಸಿಲಿಂಡರ್ ಒಂದಕ್ಕೆ ಬೆಂಕಿ ತಗುಲಿ ಸ್ಫೋಟಗೊಂಡಿದ್ದು, ಅದೃಷ್ಟವಶಾತ್​ ಯಾವುದೇ ಸಾವು, ನೋವು ಸಂಭವಿಸಿಲ್ಲ.

Gas cylinder explosion in Mangalore
ಗ್ಯಾಸ್ ಸಿಲಿಂಡರ್ ಸ್ಪೋಟ

By

Published : May 29, 2020, 9:01 AM IST

Updated : May 29, 2020, 2:00 PM IST

ಮಂಗಳೂರು: ಗ್ಯಾಸ್ ಸಿಲಿಂಡರ್ ರಿಪೇರಿ ಅಂಗಡಿಯಲ್ಲಿ ಸಿಲಿಂಡರ್​​ಗೆ ಬೆಂಕಿ ತಗುಲಿ ಸ್ಫೋಟಗೊಂಡಿರುವ ಘಟನೆ ನಿನ್ನೆ ಸಂಜೆ ನಗರದ ಜಪ್ಪು ಮಾರ್ಕೆಟ್ ಬಳಿ ನಡೆದಿದೆ.

ಬೆಂಕಿ ಕಂಡ ತಕ್ಷಣ ಶಾಪ್ ಸಿಬ್ಬಂದಿ ಸಿಲಿಂಡರನ್ನು ಹೊರಗಡೆ ಎಸೆದ ಪರಿಣಾಮ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಿಲಿಂಡರ್ ಸ್ಪೋಟ

ಆದರೆ ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಸಿಲಿಂಡರ್​​ನ ತುಂಡುಗಳು 40-50 ಮೀಟರ್ ದೂರಕ್ಕೆ ಚಿಮ್ಮಿವೆ. ಒಂದು ತುಂಡು ಜಪ್ಪು ಮೀನು ಮಾರುಕಟ್ಟೆಯ ಒಳಗೆ ಬಿದ್ದಿದೆ. ಅಲ್ಲದೆ ಸಿಲಿಂಡರ್ ಭಾಗಗಳು ಸ್ಫೋಟಗೊಂಡು ಸಿಡಿದ ಪರಿಣಾಮ ಅಲ್ಲೇ ಪಕ್ಕದ ಅಂಗಡಿಯ ಶೆಟರ್ ಗೆ ಹಾನಿಯಾಗಿದೆ‌. ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದೆ.

ಸ್ಫೋಟಕದ ರೀತಿ ಸಿಡಿದ ಸಿಲಿಂಡರ್ ತುಂಡುಗಳು ಯಾರ ಮೇಲಾದರೂ ಬಿದ್ದಿದ್ದರೆ ಖಂಡಿತಾ ಪ್ರಾಣಾಪಾಯ ಸಂಭವಿಸುತ್ತಿತ್ತು. ಸ್ವಲ್ಪದರಲ್ಲೇ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

Last Updated : May 29, 2020, 2:00 PM IST

ABOUT THE AUTHOR

...view details