ಕರ್ನಾಟಕ

karnataka

ETV Bharat / state

ಹೆದ್ದಾರಿ ಪಕ್ಕ ಎಲ್ಲೆಂದರಲ್ಲಿ ಕಸ: ಗುಂಡ್ಯ ಗ್ರಾಮ ಪಂಚಾಯತ್​ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ, ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗಿದೆ. ಇದು ಗುಂಡ್ಯ ಗ್ರಾಮ ಪಂಚಾಯತ್​ ನಿರ್ಲಕ್ಷ್ಯವೆಂದು ನೀತಿ ಟ್ರಸ್ಟ್​ ಅಧ್ಯಕ್ಷರು ಆರೋಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಎಲ್ಲೆಂದರಲ್ಲಿ ಕಸ

By

Published : Sep 26, 2019, 12:50 PM IST

ಮಂಗಳೂರು:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಗುಂಡ್ಯ ಗ್ರಾಮದ ಬಳಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯಲಾಗಿದೆ. ಇಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್​ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬದಿ ಎಲ್ಲೆಂದರಲ್ಲಿ ಕಸ

ಪುಷ್ಪಗಿರಿ ವನ್ಯಧಾಮದ ಸುಂದರ ಪ್ರಕೃತಿಯ ನಡುವೆ ಹರಿದು ಬರುವ ಒಂದು ಚಿಕ್ಕ ತೊರೆಯ ನೀರಿಗೆ ಈ ಪ್ರದೇಶದ ಎಲ್ಲಾ ಕಸ, ತ್ಯಾಜ್ಯಗಳನ್ನು ತಂದು ಸುರಿದು ಗಬ್ಬು ನಾರುವಂತೆ ಮಾಡಲಾಗಿದೆ. ಇದೇ ನೀರನ್ನು ಪ್ರವಾಸಿಗರು ಸೇರಿದಂತೆ‌ ಸಾರ್ವಜನಿಕರು ಕುಡಿಯಲು ಉಪಯೋಗಿಸುತ್ತಾರೆ. ಆದರೂ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯತ್​ ನಡೆಯಿಂದ ಸ್ಥಳೀಯರಿಗೆ ಕಿರಿ ಕಿರಿ ಉಂಟಾಗಿದೆ.

ಈ ಕುರಿತಂತೆ ನೀತಿ ಸಾಮಾಜಿಕ ಸಂಘಟನೆ ಗ್ರಾಮ ಪಂಚಾಯತ್​ ಎಚ್ಚರಿಕೆ ನೀಡಿದ್ದು, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಈ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಕಸವನ್ನು ಕೂಡಲೇ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯತ್​ಗೆ ಆಗ್ರಹಿಸಿದ್ದಾರೆ.

ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಸೇರಿದಂತೆ ದಕ್ಷಿಣ ಕನ್ನಡದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರು ಇಲ್ಲಿ ಚಹ-ತಿಂಡಿಗಳನ್ನು ಸೇವಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಮುಂದೆ ಸಾಗುತ್ತಾರೆ. ಆದುದರಿಂದ ಈ ಗ್ರಾಮೀಣ ಪ್ರದೇಶ ದಿನದಿಂದ ದಿನಕ್ಕೆ ಅಭಿವೃದ್ಧಿಯ ಜೊತೆಗೆ ಸ್ಥಳೀಯ ವ್ಯಾಪಾರಸ್ಥರಿಗೆ ಜೀವನೋಪಾಯ ಕಲ್ಪಿಸಿದೆ.

ABOUT THE AUTHOR

...view details