ಕರ್ನಾಟಕ

karnataka

ETV Bharat / state

ಮಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳ ಬಂಧನ - Ganjimatha industrial area accused arrest by Bajpe police

ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ನಡೆಸಲು ಸಂಚು ಮಾಡುತ್ತಿದ್ದ ಆರೋಪದಲ್ಲಿ ತಾಲೂಕಿನ ಮುಲ್ಲಾರ್‌ಪಟ್ನ ನಿವಾಸಿಗಳಾದ ಅಬ್ದುಲ್ ಹಕೀಂ (33), ಅಬ್ದುಲ್ ರಝಾಕ್ (45), ಮುಹಮ್ಮದ್ ರಫೀಕ್ (42), ಮುಹಮ್ಮದ್ ಮನ್ಸೂರ್ (29), ಇರ್ಫಾನ್ (31) ಎಂಬುವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ganjimatha-industrial-area-robbery-accused-arrest-by-bajpe-police
ದರೋಡೆಗೆ ಸಂಚು ರೂಪಿಸಿದ ಐವರು ಆರೋಪಿಗಳ ಬಂಧನ

By

Published : Jan 31, 2021, 3:53 PM IST

ಮಂಗಳೂರು: ನಗರದ ಹೊರವಲಯದಲ್ಲಿರುವ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ನಡೆಸಲು ಸಂಚು ಮಾಡುತ್ತಿದ್ದ ಆರೋಪದಲ್ಲಿ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮುಲ್ಲಾರ್‌ಪಟ್ನ ನಿವಾಸಿಗಳಾದ ಅಬ್ದುಲ್ ಹಕೀಂ (33), ಅಬ್ದುಲ್ ರಝಾಕ್ (45), ಮುಹಮ್ಮದ್ ರಫೀಕ್ (42), ಮುಹಮ್ಮದ್ ಮನ್ಸೂರ್ (29), ಇರ್ಫಾನ್ (31) ಬಂಧಿತ ಆರೋಪಿಗಳು.

ಆರೋಪಿಗಳು ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆ ನಡೆಸಿದಾಗ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಪಿಕ್‌ಅಪ್ ವಾಹನ, ಎರಡು ಬೈಕ್​​ಗಳು, ಕತ್ತಿ, ಚೂರಿ, ಕಬ್ಬಿಣದ ಹುಕ್ಕು, ದೊಣ್ಣೆ, ಮೆಣಸಿನ ಹುಡಿ ಪ್ಯಾಕೆಟ್, ನಾಲ್ಕು ಮೊಬೈಲ್ ಫೋನ್​​ಗಳು, ಎರಡು ದನಗಳು ಮತ್ತು 15 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಮೌಲ್ಯ ಆರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬಂಧಿತರು ಮೂಡುಬಿದಿರೆ, ಎಡಪದವು, ಮಿಜಾರು, ಗಂಜಿಮಠ ಕಡೆಗಳಲ್ಲಿ ದನ ಕಳವು ಮಾಡುತ್ತಿದ್ದು, ಈ ವೇಳೆ ಯಾರಾದರೂ ಪ್ರತಿರೋಧ ಮಾಡಿದ್ದಲ್ಲಿ ಅವರ ಕಣ್ಣಿಗೆ ಮೆಣಸಿನ ಹುಡಿ ಎರಚುವುದು, ಚೂರಿಯನ್ನು ತೋರಿಸಿ ಹೆದರಿಸುತ್ತಿದ್ದುದ್ದಾಗಿ ತನಿಖೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಓದಿ:ದ.ಕ. ಜಿಲ್ಲೆಯ ಪ್ರಥಮ ಕಂಬಳ ಮುಕ್ತಾಯ: ಕಂಬಳಕ್ಕೆ ವಿಶ್ವಮಾನ್ಯತೆ ದೊರಕಿಸುವುದಾಗಿ ಡಿಸಿಎಂ ಸವದಿ ಭರವಸೆ

ಆರೋಪಿಗಳ ಗ್ಯಾಂಗ್‌ನಲ್ಲಿ ಅದ್ಯಪಾಡಿ ಮನ್ಸೂರು, ತೋಡಾರು ಫಾಯಿಜ್‌ಬೆಬ್ಬೆ ಫೈಜ್, ಜುಬೈರ್ ತೋಡಾರು, ಇರ್ಫಾದ್ ಮತ್ತು ನೌಫಲ್ ಗಂಜಿಮಠ ಎಂಬುವವರು ದಾಳಿ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಇವರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ಬಡಗ ಎಡಪದವು ಗ್ರಾಮದ ವರಣ್ ತಂತ್ರಿ ಮತ್ತು ಮೋಹಿನಿ ಎಂಬುವವರ ಎರಡು ದನಗಳ ಕಳವು, ಗಂಜಿಮಠ ಹೊಸನ್ನ ಡಿಸಿಲ್ವ ಎಂಬುವವರ ಮೂರು ದನಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details