ಕರ್ನಾಟಕ

karnataka

ETV Bharat / state

ಬೋಳೂರು ಸ್ಮಶಾನದಲ್ಲಿ ಮೃತ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರ..

ಕೋವಿಡ್-19 ಆಸ್ಪತ್ರೆಯಲ್ಲಿ ಹತ್ತಿರದ ಸಂಬಂಧಿಗಳಿಗೆ ಮೃತರನ್ನು ದೂರದಿಂದಲೇ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಜಿಲ್ಲಾಡಳಿತ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

bolur
bolur

By

Published : May 14, 2020, 9:51 AM IST

ಮಂಗಳೂರು :ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕೊರೊನಾ ಸೋಂಕಿತ ಮಹಿಳೆಯ ಅಂತ್ಯಸಂಸ್ಕಾರ ಬೋಳೂರು ಸ್ಮಶಾನದಲ್ಲಿ ನಡೆಯಿತು.

ಫಸ್ಟ್‌ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುವ ವೇಳೆ ಕೊರೊನಾ ಸೋಂಕಿಗೊಳಗಾದ ಬೋಳೂರು ನಿವಾಸಿ ಮಹಿಳೆ ನಿನ್ನೆ ಮಂಗಳೂರಿನ ಕೋವಿಡ್-19 ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರು ಮೆದುಳಿನ ಸೋಂಕಿನಿಂದ ಬಳಲುತ್ತಿದ್ದರು. ನಿನ್ನೆ ಅವರು ಮೃತಪಟ್ಟ ಬಳಿಕ ಮಂಗಳೂರಿನ ಬೋಳೂರು ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಂಗಳೂರಿನಲ್ಲಿ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೊದಲ‌ ಮಹಿಳೆ ಸಾವನ್ನಪ್ಪಿದ ಸಂದರ್ಭದಲ್ಲಿ ಬೋಳೂರು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. 2ನೇ ಮಹಿಳೆ ಮೃತರಾದಾಗ ವಿರೋಧ ಬಂದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ಗೊಂದಲವುಂಟಾಗಿ ಬಂಟ್ವಾಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಬಳಿಕ ಜಿಲ್ಲಾಡಳಿತ ಬೋಳೂರು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂಬ ತೀರ್ಮಾನ ತೆಗೆದುಕೊಂಡು ಮೂರನೇ ಮಹಿಳೆ ಸಾವನ್ನಪ್ಪಿದ್ದಾಗ ಬೋಳೂರು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ಸಾವನ್ನಪ್ಪಿದ ನಾಲ್ಕನೇ ಮಹಿಳೆಯ ಅಂತ್ಯಸಂಸ್ಕಾರವನ್ನು ಬೋಳೂರು ಸ್ಮಶಾನದಲ್ಲಿ ಮಾಡಲಾಗಿದೆ.

ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಹತ್ತಿರದ ಸಂಬಂಧಿಗಳಿಗೆ ಮೃತರನ್ನು ದೂರದಿಂದಲೇ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಜಿಲ್ಲಾಡಳಿತ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ABOUT THE AUTHOR

...view details