ಕರ್ನಾಟಕ

karnataka

ETV Bharat / state

ಕೊರೊನಾದಿಂದ ಹಿಂದೂ ಮೃತಪಟ್ಟರೇ ಅಂತ್ಯ ಸಂಸ್ಕಾರಕ್ಕೆ ಸಿದ್ಧ: ಕಾಟಿಪಳ್ಳ ರುದ್ರಭೂಮಿಯ ಮಾದರಿ ಕಾರ್ಯ - ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರಕ್ಕಾಗಿ ಅಲೆದಾಟ ನಡೆಸಿರುವ ಬೆನ್ನಲ್ಲೇ, ಕಾಟಿಪಳ್ಳ ರುದ್ರಭೂಮಿಯ ಸಮಿತಿಯು ಕೊರೊನಾ ಸೋಂಕಿನಿಂದ ಯಾವುದೇ ಹಿಂದೂ ವ್ಯಕ್ತಿ ಮೃತಪಟ್ಟಲ್ಲಿ ನಮ್ಮಲ್ಲಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಹೇಳಿದೆ.

Funeral at Katipalla Rudrada, who died from corona
ಕಾಟಿಪಳ್ಳ ರುದ್ರಭೂಮಿಯ ಮಾದರಿ ಕಾರ್ಯ

By

Published : Apr 25, 2020, 9:26 PM IST

ಮಂಗಳೂರು: ಕೊರೊನಾ ಸೋಂಕಿನಿಂದ ಯಾವುದೇ ಹಿಂದೂ ವ್ಯಕ್ತಿ ಮೃತಪಟ್ಟಲ್ಲಿ, ನಮ್ಮಲ್ಲಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಕಾಟಿಪಳ್ಳದಲ್ಲಿರುವ ಹಿಂದೂ ರುದ್ರಭೂಮಿ‌ ಮುಂದೆ ಬಂದಿದೆ. ಈ ಬಗ್ಗೆ ಹಿಂದೂ ರುದ್ರಭೂಮಿ ನವೀಕರಣ ಮತ್ತು ಅಭಿವೃದ್ಧಿ ಸಮಿತಿಯ ಸಂಚಾಲಕ ಎ.ಪಿ. ಮೋಹನ್ ಗಣೇಶಪುರ ಅವರು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಪತ್ರ ಬರೆದಿದ್ದಾರೆ. ಹಾಗೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ದಹನ ಕ್ರಿಯೆಗಳಿಗೆ ಬೇಕಾಗುವ ಸಾಮಗ್ರಿಗಳನ್ನು ನಮ್ಮ ಸಮಿತಿಯು ಉಚಿತವಾಗಿ ಪೂರೈಸಲಿದೆ ಎಂದು ಬರೆಯಲಾಗಿದೆ.

ಕಾಟಿಪಳ್ಳ ರುದ್ರಭೂಮಿಯ ಮಾದರಿ ಕಾರ್ಯ

ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನದಿಂದ ಸ್ಮಶಾನಕ್ಕೆ ಅಲೆದಾಟ ನಡೆಸಿರುವ ಅಮಾನವೀಯ ಘಟನೆ ನಡೆದಿರುವ ಬೆನ್ನಲ್ಲೇ, ಕಾಟಿಪಳ್ಳ ರುದ್ರಭೂಮಿಯ ಸಮಿತಿಯವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ‌. ಇನ್ನು ಮಂಗಳೂರು ನಗರದಿಂದ 20 ಕಿ.ಮೀ. ಅಂತರದಲ್ಲಿ ಕಾಟಿಪಳ್ಳ 3ನೇ ಬ್ಲಾಕ್​​​​​ನಲ್ಲಿ ಈ ಹಿಂದೂ ರುದ್ರಭೂಮಿಯಿದೆ.

ABOUT THE AUTHOR

...view details