ಕರ್ನಾಟಕ

karnataka

ETV Bharat / state

ಹುಂಡಿಯಲ್ಲಿ ಕೂಡಿಟ್ಟ ಪಾಕೆಟ್​ ಮನಿಯನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟ 5 ವರ್ಷದ ಬಾಲಕ - ಸಿಎಂ ಪರಿಹಾರ ನಿಧಿ

ಕೋವಿಡ್​​​-19 ಸರ್ವವ್ಯಾಪಿ ಸೋಂಕು ನಿಯಂತ್ರಿಸಲು ಸಿಎಂ ಪರಿಹಾರ ನಿಧಿಗೆ ಮಂಗಳೂರಿನ 5 ವರ್ಷದ ಪುಟ್ಟ ಬಾಲಕ ತಾನು ಕೂಡಿಟ್ಟಿದ್ದ ಪಾಕೆಟ್​ ಮನಿಯನ್ನು ದೇಣಿಗೆಯಾಗಿ ನೀಡಿದ್ದಾನೆ.

fund donation by small boy for corona cm relief  fund
ದೇಣಿಗೆ ನೀಡಿದ ಬಾಲಕ

By

Published : Apr 2, 2020, 11:04 AM IST

ಮಂಗಳೂರು/ದಕ್ಷಿಣ ಕನ್ನಡ: ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಲು ಕೇಂದ್ರ ಹಾಗೂ ರಾಜ್ಯ ಸರಕಾರ ದಾನಿಗಳಿಂದ ದೇಣಿಗೆ ಸಂಗ್ರಹಿಸುತ್ತಿದೆ.

ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಬಾಲಕ

ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ ಅಳಿಲು ಸೇವೆ ಮಾಡಿದ್ದಾನೆ. ಅತಾ-ವುರ್-ರೆಹ್ಮಾನ್ ಎಂಬ ಬಾಲಕ ತನ್ನ ತಂದೆ ಹಾಗೂ ಮನೆಯವರು ನೀಡುವ ಪಾಕೆಟ್ ಮನಿಯನ್ನು ಜೋಪಾನವಾಗಿ ಹುಂಡಿಯಲ್ಲಿ ಹಾಕಿದ್ದ. ಈ ಮೂರು ದಿನಗಳಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಸರಕಾರ ಎಲ್ಲರಿಂದ ದೇಣಿಗೆ ಕೇಳುತ್ತಿರುವುದನ್ನು ಅರಿತ ಬಾಲಕ ತಾನೂ ತನ್ನ ಪಾಕೆಟ್ ಮನಿಯನ್ನು ದೇಣಿಗೆ ನೀಡಿದ್ದಾನೆ.

ಇದನ್ನು ಪ್ರೋತ್ಸಾಹಿಸಿದ ಬಾಲಕನ ಪೋಷಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಡಿಸಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಹಣವನ್ನು ಸಲ್ಲಿಸಿದ್ದಾರೆ. ಭಟ್ಕಳ ಮೂಲದವರಾದ ಅತಾ-ವುರ್-ರೆಹ್ಮಾನ್ ಕುಟುಂಬದವರು ಈಗ ಮಂಗಳೂರಿನ ಫಳ್ನೀರ್ ನಲ್ಲಿ ನೆಲೆಸಿದ್ದಾರೆ. ಅತಾ-ವುರ್-ರೆಹ್ಮಾನ್ ಮಂಗಳೂರಿನ ಯನೆಪೊಯ ಮೊಂಟೆಸ್ಸರಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಇದೀಗ ಈ ಪುಟ್ಟ ಬಾಲಕನ ಈ ಕಳಕಳಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ABOUT THE AUTHOR

...view details