ಬಂಟ್ವಾಳ: ಸರ್ಕಾರದ ಸೂಚನೆಯಂತೆ ಶನಿವಾರ ರಾತ್ರಿಯಿಂದಲೇ ಜನಸಂಚಾರ ನಿಷೇಧಿಸಿದ ಕಾರಣ ಇಂದು ಬೆಳಗ್ಗೆಯೇ ಬಂಟ್ವಾಳ, ಬಿ ಸಿ ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ ಸ್ತಬ್ಧಗೊಂಡಿತ್ತು.
ಭಾನುವಾರದ ಲಾಕ್‌ಡೌನ್ ಎಫೆಕ್ಟ್.. ಬಂಟ್ವಾಳದ ರಸ್ತೆಗಳು ಸ್ತಬ್ಧ
ಈಗಾಗಲೇ ಕೆಲ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸೋಮವಾರದಿಂದ ನಿರ್ದಿಷ್ಟ ಸಮಯದವರೆಗೆ ಮಾತ್ರ ಅಂಗಡಿ ತೆರೆಯುವ ನಿರ್ಧಾರವನ್ನು ತಳೆದಿದ್ದಾರೆ ಎನ್ನಲಾಗಿದೆ..
Bhantwala
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಂಟ್ವಾಳ, ಕಸಬಾ ಮತ್ತು ಬಿ.ಮೂಡ ಗ್ರಾಮಗಳಲ್ಲಿ ಕೊರೊನಾ ಅಬ್ಬರಿಸಿದೆ. ಕಳೆದ ಎರಡೂವರೆ ತಿಂಗಳಲ್ಲಿ ನಾಲ್ಕು ಸಾವು ಸಂಭವಿಸಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸೋಮವಾರದಿಂದ ನಿರ್ದಿಷ್ಟ ಸಮಯದವರೆಗೆ ಮಾತ್ರ ಅಂಗಡಿ ತೆರೆಯುವ ನಿರ್ಧಾರವನ್ನು ತಳೆದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಮೂಡ ಗ್ರಾಮದಲ್ಲಿ 7, ಬಿ.ಕಸಬಾ ಗ್ರಾಮದಲ್ಲಿ 12 ಪ್ರಕರಣ ವರದಿಯಾಗಿದ್ದು, ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.