ಕರ್ನಾಟಕ

karnataka

ETV Bharat / state

ಗಗನಕ್ಕೇರುತ್ತಿರುವ ಇಂಧನ ಬೆಲೆ, ಸಂಕಷ್ಟದಲ್ಲಿ ಫುಡ್​ ಡೆಲಿವರಿ ಬಾಯ್ಸ್​​! - mangalore food delivery boys

ಏರಿಕೆ ಕಾಣುತ್ತಿರುವ ಇಂಧನ ಬೆಲೆ ಪ್ರತಿ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಸ್ವಂತ ವಾಹನ ಬಳಸಿ ಮನೆ ಮನೆಗೆ ತಿಂಡಿ - ತಿನಿಸು, ಆಹಾರ ಪೂರೈಸುವ ಫುಡ್​ ಡೆಲಿವರಿ ಬಾಯ್ಸ್ ಕೂಡ​​ ಸಂಕಷ್ಟಕ್ಕೀಡಾಗಿದ್ದಾರೆ. ಮಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದ ಜನರಿಗೀಗ ಏರಿಕೆ ಕಂಡಿರುವ ಇಂಧನ ಬೆಲೆಯಿಂದ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ನಿರ್ಮಾಣವಾಗಿದೆ.

fuel price effects on food delivery boys !
ಗಗನಕ್ಕೇರಿತ್ತಿರುವ ಇಂಧನ ಬೆಲೆ, ಸಂಕಷ್ಟದಲ್ಲಿ ಫುಡ್​ ಡೆಲಿವರಿ ಬಾಯ್ಸ್​​.!?

By

Published : Apr 6, 2021, 4:54 PM IST

Updated : Apr 6, 2021, 6:16 PM IST

ಮಂಗಳೂರು/ಹುಬ್ಬಳ್ಳಿ:ದಿನೇ ದಿನೆ ಏರಿಕೆ ಕಂಡ ಇಂಧನ ಬೆಲೆ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರೊನಾದಿಂದ ಕಂಗೆಟ್ಟವರ ಜೇಬಿಗೆ ಕತ್ತರಿ ಹಾಕಿದೆ. ಇದಕ್ಕೆ ಫುಡ್ ಡೆಲಿವರಿ ಬಾಯ್ಸ್​ ಕೂಡ ಹೊರತಾಗಿಲ್ಲ. ತಮ್ಮ ಸ್ವಂತ ಸ್ಕೂಟರ್​, ಬೈಕ್​​ ಮೂಲಕ ಮನೆ-ಮನೆಗೆ ತೆರಳಿ ತಮ್ಮ ಸೇವೆ ಒದಗಿಸುತ್ತಿರುವ ಅವರ ಜೀವನವೀಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.

ಗಗನಕ್ಕೇರಿತ್ತಿರುವ ಇಂಧನ ಬೆಲೆ, ಸಂಕಷ್ಟದಲ್ಲಿ ಫುಡ್​ ಡೆಲಿವರಿ ಬಾಯ್ಸ್​​.!?

ಮಂಗಳೂರಿನಲ್ಲಿ ಸುಮಾರು 200 ಫುಡ್ ಡೆಲಿವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ದಿನಕ್ಕೆ ಇವರು ಗಳಿಸುವ ಸರಾಸರಿ ಆದಾಯ ಸರಾಸರಿ 400 ರೂ. ಆದರೆ ತೈಲ ಬೆಲೆ ಏರಿಕೆಯಿಂದ ಆದಾಯದ ಬಹುಪಾಲನ್ನು ಪೆಟ್ರೋಲ್​​ಗೆ ಸುರಿಯಬೇಕಾಗಿದೆ ಎಂದು ಸ್ವಿಗ್ಗಿ ಸಿಬ್ಬಂದಿ ತಿಳಿಸಿದ್ದಾರೆ.

ನಾವು ಗಳಿಸುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಪೆಟ್ರೋಲ್​ಗೆ ಹಾಕಬೇಕಿದೆ. ಇದರ ಹೊರತು ಗಾಡಿ ನಿರ್ವಹಣೆ ಕೂಡ ನಮ್ಮ ಹಣದಲ್ಲೇ ಆಗಬೇಕಿದೆ. ಇಷ್ಟೆಲ್ಲಾ ಆಗಿ ಉಳಿದ ಬಿಡಿಗಾಸಿನಲ್ಲಿ ಜೀವನ ಸಾಗಿಸೋದು ಬಹಳ ಕಷ್ಟ. ಹಾಗಾಗಿ ಸರ್ಕಾರ ತೈಲ ಬೆಲೆ ಕಡಿತಗೊಳಿಸಿ ನಮ್ಮನ್ನು ಕಾಪಾಡಬೇಕಿದೆ ಎಂದು ಫುಡ್ ಡೆಲಿವರಿ ಬಾಯ್ಸ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಎಲ್ಲೆಡೆ ಪೊಲೀಸರು ಇರೋಕಾಗಲ್ಲ.. ಅವರಿಟ್ಟ ಕಣ್ಣುಗಳಿವೆ, ಹುಷಾರು!

ಇಂಧನ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಮೊದಲೇ ಕೊರೊನಾದಿಂದ ಹೇರಲ್ಪಟ್ಟ ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ಜನರ ಜೀವನ ನಿರ್ವಹಣೆಗೆ ತೈಲ ಬೆಲೆ ಏರಿಕೆ ಮತ್ತಷ್ಟು ಆಘಾತ ತಂದಿದೆ. ಸರ್ಕಾರ ಕೂಡಲೇ ಇಂಧನ ಬೆಲೆ ಕಡಿತಗೊಳಿಸಬೇಕು ಎಂದು ಫುಡ್​ ಡೆಲಿವರಿ ಬಾಯ್ಸ್ ಮನವಿ ಮಾಡಿದ್ದಾರೆ.

Last Updated : Apr 6, 2021, 6:16 PM IST

ABOUT THE AUTHOR

...view details