ಕರ್ನಾಟಕ

karnataka

ETV Bharat / state

ಸೋಂಕಿತರ ಅಂತ್ಯಸಂಸ್ಕಾರವನ್ನು ಉಚಿತವಾಗಿ ಮಾಡಲು ಪಾಲಿಕೆ ನಿರ್ಧಾರ: ವೇದವ್ಯಾಸ ಕಾಮತ್ - ಮಂಗಳೂರು ಕೊರೊನಾ ಅಂತ್ಯಸಂಸ್ಕಾರ ಸುದ್ದಿ,

ಕೊರೊನಾದಿಂದ ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರವನ್ನು ಉಚಿತವಾಗಿ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಕಳೆದ ಬಾರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ದುಬಾರಿ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

free funeral for corona death patients, free funeral for corona death patients in Mangalore, Mangalore corona death, Mangalore free funeral, Mangalore free funeral news, ಕೊರೊನಾ ಮೃತ ರೋಗಿಗಳ ಅಂತ್ಯಸಂಸ್ಕಾರ ಉಚಿತ, ಮಂಗಳೂರಿನಲ್ಲಿ ಕೊರೊನಾ ಮೃತ ರೋಗಿಗಳ ಅಂತ್ಯಸಂಸ್ಕಾರ ಉಚಿತ, ಮಂಗಳೂರು ಕೊರೊನಾ ಅಂತ್ಯಸಂಸ್ಕಾರ ಸುದ್ದಿ, ಮಂಗಳೂರು ಕೊರೊನಾ ಸುದ್ದಿ,
ಶಾಸಕ ವೇದವ್ಯಾಸ ಕಾಮತ್

By

Published : Apr 22, 2021, 12:37 PM IST

ಮಂಗಳೂರು: ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಶಾಸಕ ವೇದವ್ಯಾಸ ಕಾಮತ್

ಕಳೆದ ಬಾರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ದುಬಾರಿ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದ ಕಾರಣ ಈ ಬಾರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ಮಾಡಲು ನಿರ್ಧರಿಸಲಾಗಿದೆ. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹಿಂದಿನಂತೆ ಆಗಬಾರದು ಎಂದು ಈ ನಿರ್ಣಯ ಮಾಡಿದ್ದೇವೆ ಎಂದು ಶಾಸಕರು ತಿಳಿಸಿದರು.

ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಮಾಡಲಾಗುತ್ತಿತ್ತು. ಇದೀಗ ಅಲ್ಲಿದ್ದ ಒಂದು ಚಿತಾಗಾರವನ್ನು ಎರಡು ಚಿತಾಗಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಿಗೆಯಲ್ಲಿ ಅಗ್ನಿಸ್ಪರ್ಶ ಮಾಡಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಪಾಲಿಕೆ ಭರಿಸಲಿದೆ ಎಂದು ಶಾಸಕರು ತಿಳಿಸಿದರು.

ABOUT THE AUTHOR

...view details