ಕರ್ನಾಟಕ

karnataka

ETV Bharat / state

ಆಪತ್ಬಾಂಧವ ಸಮಾಜ ಸೇವಾ ಸಂಘದಿಂದ ಬಡವರಿಗೆ ಊಟದ ವ್ಯವಸ್ಥೆ

ಮಂಗಳೂರಿನ ನಗರದಲ್ಲಿ ಆಪತ್ಬಾಂಧವ ಸಮಾಜ ಸೇವಾ ಸಂಘದ ವತಿಯಿಂದ ಹಸಿವಿನಿಂದ ನರಳುತ್ತಿದ್ದ ಬಡವರಿಗೆ ಆಹಾರದ ಪೊಟ್ಟಣ ನೀಡಲಾಯಿತು.

By

Published : Apr 3, 2020, 12:12 AM IST

free-food-distribution-to-poor-people
ಆಪತ್ಭಾಂದವ ಸಮಾಜ ಸೇವಾ ಸಂಘದಿಂದ ಊಟದ ವ್ಯವಸ್ಥೆ

ಮಂಗಳೂರು: ಕೊರೊನಾ ತಡೆಗೆ ದೇಶವೇ ಲಾಕ್​ಡೌನ್​ ಆಗಿದ್ದು, ದಿನಗೂಲಿ ನಂಬಿದ್ದ ಜನರು ಬೀದಿಗೆ ಬಿದ್ದಿದ್ದಾರೆ. ಆಹಾರವಿಲ್ಲದೇ ನರಳುತ್ತಿದ್ದ ಕಾರ್ಮಿಕರಿಗೆ ಆಪತ್ಬಾಂಧವ ಸಮಾಜ ಸೇವಾ ಸಂಘದ ವತಿಯಿಂದ ಆಹಾರದ ಪೊಟ್ಟಣ ನೀಡಲಾಯಿತು.

ಆಪತ್ಬಾಂಧವ ಸಮಾಜ ಸೇವಾ ಸಂಘದಿಂದ ಊಟದ ವ್ಯವಸ್ಥೆ

ನಗರದ ಬಸ್​ ನಿಲ್ದಾಣ, ತೂಗು ಸೇತುವೆ ಹಾಗೂ ಅಂಗಡಿ ಮುಂಭಾಗಗಳಲ್ಲಿ ಕುಳಿತಿದ್ದ ನೂರಾರು ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ಊಟವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಆಪತ್ಬಾಂಧವ ಸಮಾಜ ಸೇವಾ ಸಂಘದ ಸ್ಥಾಪಕ ಉಮೇಶ್ ಇಡ್ಯಾ, ತಾರಾ ಧನರಾಜ್, ಸರೋಜ ಶೆಟ್ಟಿ, ತಾರನಾಥ ಶೆಟ್ಟಿ, ಕಾರ್ಯದರ್ಶಿ ಪೂಜಾ ರಾವ್, ಮಹೇಶ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಕಡಂಬೋಡಿ, ಸುರೇಂದ್ರ ಆಚಾರ್ಯ, ಗೀತಾ ಕೃಷ್ಣಾಪುರ, ಮಂಜುನಾಥ್ ಆಚಾರ್ಯ, ವಿನೋದ್ ಕುಮಾರ್, ಧನ್ಯಾ ಕುಲಾಲ್, ಮನೀಷ್, ವಾಸುದೇವ ಶೆಟ್ಟಿ, ಶಿವರಾಜ್ ದೇವಾಡಿಗ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ABOUT THE AUTHOR

...view details