ಬಂಟ್ವಾಳ: ಮೆಸ್ಕಾಂ ಬಂಟ್ವಾಳ ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶ್ರೀರಾಮ ಎಲೆಕ್ಟ್ರಿಕಲ್ ಸಹಕಾರದಲ್ಲಿ ತಾಲೂಕಿನ ಎರಡು ಗ್ರಾಮಗಳಾದ ಮಣಿನಾಲ್ಕೂರು ಮತ್ತು ಸರಪಾಡಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಡು ಬಡತನದ 13 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಿ ಕೊಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ: 13 ಬಡ ಎಸ್ಸಿ-ಎಸ್ಟಿ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ - ಮೆಸ್ಕಾಂ ಬಂಟ್ವಾಳ ಉಪವಿಭಾಗದ ಅಧಿಕಾರಿ
ಕಳೆದ ಹಲವು ಸಮಯಗಳಿಂದ ಕಾರಣಾಂತರದಿಂದ ಸರಪಾಡಿಯ ಕಂಗಿನಾಡಿ, ಮಣಿನಾಲ್ಕೂರಿನ ಕೊಟ್ಟಿಂಜ, ನೇಲ್ಯಪಲ್ಕೆ ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೊಳಪಟ್ಟ ಈ 13 ಮನೆಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು. ಈ ಬಗ್ಗೆ ಸ್ಥಳೀಯ ಪ್ರಮುಖರು ಶಾಸಕ ರಾಜೇಶ್ ನಾಯ್ಕ್ ಗಮನ ಸೆಳೆದಿದ್ದರು.
ಕಳೆದ ಹಲವು ಸಮಯಗಳಿಂದ ಕಾರಣಾಂತರದಿಂದ ಸರಪಾಡಿಯ ಕಂಗಿನಾಡಿ, ಮಣಿನಾಲ್ಕೂರಿನ ಕೊಟ್ಟಿಂಜ, ನೇಲ್ಯಪಲ್ಕೆ ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೊಳಪಟ್ಟ ಈ 13 ಮನೆಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು. ಈ ಬಗ್ಗೆ ಸ್ಥಳೀಯ ಪ್ರಮುಖರು ಶಾಸಕ ರಾಜೇಶ್ ನಾಯ್ಕ್ ಗಮನ ಸೆಳೆದಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ 13 ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸುವಂತೆ ಸೂಚಿಸಿದ್ದರು.
ವಿಶೇಷ ಮುತುವರ್ಜಿ ವಹಿಸಿದ ಮೆಸ್ಕಾಂನ ಅಧೀಕ್ಷಕ ಮಂಜಪ್ಪ ಮಾರ್ಗದರ್ಶನದಂತೆ ಬಂಟ್ವಾಳ ಮೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿ ವಿದ್ಯುತ್ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ತಲಾ 4 ರಿಂದ 5 ಸಾವಿರ ರೂ. ವನ್ನು ವೈಯಕ್ತಿಕ ನೆಲೆಯಲ್ಲಿ ಭರಿಸಿದ್ದಾರೆ. ಶ್ರೀರಾಮ ಎಲೆಕ್ಟ್ರಿಕಲ್ ನ ಗುತ್ತಿಗೆದಾರ ದೇವದಾಸ್ ಅವರನ್ನೊಳಗೊಂಡ ತಂಡ ವಿದ್ಯುತ್ ವಯರ್ ಜೋಡಣೆ ಸಹಿತ ಎಲ್ಲ ಕಾರ್ಯ ಉಚಿತವಾಗಿ ಮಾಡಿಕೊಟ್ಟರೆ, ಮೆಸ್ಕಾಂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿತು.
ಮಂಗಳವಾರ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸ್ಥಳಕ್ಕೆ ಭೇಟಿ ನೀಡಿದರು. ಫಲಾನುಭವಿ ಇಂದಿರಾ ಅವರ ನಿವಾಸದ ವಿದ್ಯುತ್ ಸ್ವಿಚ್ ಆನ್ ಮಾಡಿ ಉದ್ಘಾಟಿಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪೈ, ಸಹಾಯಕ ಇಂಜಿನಿಯರ್ ಗಣೇಶ್, ಕಿರಿಯ ಇಂಜಿನಿಯರ್ ನಿತಿನ್ ಕಕ್ಕೆಪದವು ಶಾಖೆ, ಇತರರು ಉಪಸ್ಥಿತರಿದ್ದರು.