ಮಂಗಳೂರು: ಕೌನ್ ಬನೇಗಾ ಕರೊಡ್ಪತಿ (ಕೆಬಿಸಿ) ಮೊಬೈಲ್ ಸಿಮ್ ಸ್ಪರ್ಧೆ ಗೆದ್ದಿರುವುದಾಗಿ ಹೇಳಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 78,200 ರೂ. ವಂಚನೆ ಮಾಡಲಾಗಿದೆ.
ಮಂಗಳೂರಿನ ವ್ಯಕ್ತಿಯೊಬ್ಬರನ್ನು ಪಾಕಿಸ್ತಾನದ ಮೊಬೈಲ್ ನಂಬರ್ +923059296144ನಿಂದ ವಾಟ್ಸ್ಆ್ಯಪ್ ಕರೆ ಮೂಲಕ ಸಂಪರ್ಕಿಸಿ ವಂಚನೆ ಮಾಡಲಾಗಿದೆ.
ಕೆಬಿಸಿಯ ಸಿಮ್ ಸ್ಪರ್ಧೆಯಲ್ಲಿ ನೀವು 25 ಲಕ್ಷ ರೂ. ವಿಜಯಿಯಾಗಿದ್ದೀರಿ ಎಂದು ನಂಬಿಸಿದ ವಂಚಕ ಮಂಗಳೂರಿನ ವ್ಯಕ್ತಿಯಿಂದ 8,200 ರೂ., 25,000 ರೂ. ಮತ್ತು ಆದಾಯ ತೆರಿಗೆ ಹಣ 45,000 ರೂ. ಬ್ಯಾಂಕ್ ಖಾತೆಗೆ ಹಾಕಿಸಿದ್ದಾರೆ. ಅವರ ನಯವಾದ ಮಾತು ನಂಬಿದ ಮಂಗಳೂರಿನ ವ್ಯಕ್ತಿ ಫೋನ್ ಪೇ ಮೂಲಕ ಹಣವನ್ನು ಪಾವತಿಸಿದ್ದಾರೆ.
ಪೋನ್ ಪೇ ಮೂಲಕ ಹಣವನ್ನು ಪಾವತಿ ಮಂಗಳೂರಿನ ವ್ಯಕ್ತಿಯನ್ನು ನಂಬಿಸಲು ವಂಚಕರು ಮೇಲ್ನೋಟಕ್ಕೆ ಅಸಲಿಯಂತೆ ಕಾಣುವ ಪತ್ರವನ್ನು ಕಳುಹಿಸಿದ್ದರು. ಹಣವನ್ನು ರಾಣಾ ಪ್ರತಾಪ್ ಎಂಬವರ ಹೆಸರಿಗೆ ಪಾವತಿಸಲು ಸೂಚಿಸಿದ್ದು, ಅವರು ಕೆಬಿಸಿ ಉದ್ಯೋಗಿ ಎಂದು ಬಿಂಬಿಸಲು ಐಡಿ ಕಾರ್ಡ್ ಕೂಡ ಕಳುಹಿಸಿದ್ದರು.
ಈ ಬಗ್ಗೆ ವಂಚನೆಗೊಳಗಾದ ಮಂಗಳೂರಿನ ವ್ಯಕ್ತಿ ಇನ್ನಷ್ಟೇ ಪೊಲೀಸರಿಗೆ ದೂರು ನೀಡಬೇಕಾಗಿದೆ.