ಕರ್ನಾಟಕ

karnataka

ETV Bharat / state

ಕ್ರೆಡಿಟ್ ಪಾಯಿಂಟ್​ ನೋಡುವುದಾಗಿ ಒಟಿಪಿ ಪಡೆದು ವಂಚನೆ

ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿದ ವ್ಯಕ್ತಿ ಕ್ರೆಡಿಟ್ ಕಾರ್ಡ್ ಒಟಿಪಿ ಪಡೆದು ರೂ. 90 ಸಾವಿರ ಮತ್ತು ಡೆಬಿಟ್ ಕಾರ್ಡ್ ಸಿವಿವಿ ಪಡೆದು ರೂ. 90 ಸಾವಿರ ಲಪಟಾಯಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

fraud claiming to increase debit cards point and limit
ಕ್ರೆಡಿಟ್ ಪಾಯಿಂಟ್​ ನೂಡುವುದಾಗಿ ಓಟಿಪಿ ಪಡೆದು ವಂಚನೆ

By

Published : Mar 15, 2022, 4:27 PM IST

Updated : Mar 15, 2022, 4:43 PM IST

ಮಂಗಳೂರು :ವ್ಯಕ್ತಿಯೊಬ್ಬರಿಗೆ ಡೆಬಿಟ್ ಕಾರ್ಡ್ ಲಿಮಿಟೇಶನ್ ಹೆಚ್ಚಿಸುವ ಮತ್ತು ಕ್ರೆಡಿಟ್ ಕಾರ್ಡ್​ನ ರಿವಾರ್ಡ್ ನೋಡುವ ನೆಪವೊಡ್ಡಿ ಒಟಿಪಿ ಪಡೆದು ವಂಚನೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ವ್ಯಕ್ತಿಯೊಬ್ಬರಿಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ನವರೆಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದನು. ಆಕ್ಸಿಸ್ ಬ್ಯಾಂಕ್​ನ ರಿವಾರ್ಡ್ ಪಾಯಿಂಟ್ ಬಂದಿರುವುದಾಗಿ ತಿಳಿಸಿ ಅದನ್ನು ನೋಡಲು ಒಟಿಪಿ ಪಡೆದಿದ್ದನು. ಇನ್ನೊಮ್ಮೆ ರಿವಾರ್ಡ್ ಪಾಯಿಂಟ್ ಆ್ಯಕ್ಟಿವೇಶನ್ ಮಾಡಲು ಒಟಿಪಿ ಪಡೆದಿದ್ದನು.

ಮಧ್ಯಾಹ್ನದ ಬಳಿಕ ಮತ್ತೆ ಕರೆ ಮಾಡಿದ ಇದೇ ವ್ಯಕ್ತಿ ಡೆಬಿಟ್ ಕಾರ್ಡ್ ಲಿಮಿಟೇಶನ್ ಹೆಚ್ಚುಗೊಳಿಸುವ ನೆಪವೊಡ್ಡಿ ಡೆಬಿಟ್ ಕಾರ್ಡ್​ನ ನಂಬರ್ ಮತ್ತು ಸಿವಿವಿ ನಂಬರ್ ಪಡೆದಿದ್ದಾನೆ.

ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿದ ವ್ಯಕ್ತಿ ಕ್ರೆಡಿಟ್ ಕಾರ್ಡ್ ಒಟಿಪಿ ಪಡೆದು ರೂ. 90 ಸಾವಿರ ಮತ್ತು ಡೆಬಿಟ್ ಕಾರ್ಡ್ ಸಿವಿವಿ ಪಡೆದು ರೂ. 90 ಸಾವಿರ ಲಪಟಾಯಿಸಿದ್ದಾನೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೈಟ್‌ ಮಾರುತ್ತಿದ್ದ ಜಾಲ ಪತ್ತೆ: ಎಂಟು ಆರೋಪಿಗಳ ಬಂಧನ

Last Updated : Mar 15, 2022, 4:43 PM IST

ABOUT THE AUTHOR

...view details