ಕರ್ನಾಟಕ

karnataka

ETV Bharat / state

ಮನೆ ಕಟ್ಟಲು ಹಣದ ಆಮಿಷ- ವ್ಯಕ್ತಿಗೆ 2.92 ಲಕ್ಷ ರೂ. ವಂಚನೆ

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಗಿಫ್ಟ್​ ಬಂದಿದೆ ಎಂದು ನಂಬಿಸಿ 2.92 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.

Fraud case register in Mangalore, Mangalore crime news, Cheating case, ಮಂಗಳೂರಿನಲ್ಲಿ ವಂಚನೆ ಪ್ರಕರಣ ದಾಖಲು, ಮಂಗಳೂರು ಅಪರಾಧ ಸುದ್ದಿ, ಚಿಟಿಂಗ್​ ಪ್ರಕರಣ,
ವ್ಯಕ್ತಿಗೆ 2.92 ಲಕ್ಷ ರೂ ವಂಚನೆ

By

Published : Jan 19, 2022, 12:26 PM IST

ಮಂಗಳೂರು : ವ್ಯಕ್ತಿಯೊಬ್ಬರಿಗೆ ಮನೆ ಕಟ್ಟಲು ಹಣ ನೀಡುವುದಾಗಿ ಮತ್ತು ಗಿಫ್ಟ್​ ಕಳುಹಿಸುವುದಾಗಿ ಆಮಿಷವೊಡ್ಡಿ ರೂ 2.92 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ವಿದೇಶಿ ನಂಬರ್​ನಿಂದ ವಾಟ್ಸ್ಆ್ಯಪ್ ಮೆಸೇಜ್ ಮಾಡಿ ಮನೆ ಕಟ್ಟಲು ಹಣ ನೀಡುವುದಾಗಿ ಮತ್ತು ಗಿಫ್ಟ್​ ಕಳುಹಿಸುವುದಾಗಿ ತಿಳಿಸಿದ್ದ.

ಪದೇ ಪದೆ ಮೆಸೇಜ್ ಕಳುಹಿಸಿದ ಬಳಿಕ ಅದೇ ವ್ಯಕ್ತಿ ಕರೆ ಮಾಡಿ ಗಿಫ್ಟ್​ ದೆಹಲಿಗೆ ಬಂದಿದೆ. ಅದನ್ನು ಮಂಗಳೂರಿಗೆ ಕಳುಹಿಸಲು 35 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದಾನೆ. ಆರೋಪಿ ಮಾತು ನಂಬಿದ ವ್ಯಕ್ತಿ 35 ಸಾವಿರ ರೂ.ಗಳನ್ನು ಆ ವ್ಯಕ್ತಿಯ ನಂಬರ್​ಗೆ​ ಗೂಗಲ್ ಪೇ ಮಾಡಿದ್ದಾರೆ. ಬಳಿಕ ಅದೇ ವ್ಯಕ್ತಿ ಮತ್ತೆ 97,000 ಪಾವತಿಸುವಂತೆ ತಿಳಿಸಿದ್ದಾರೆ.

ಅದರಂತೆ ರೂ. 97 ಸಾವಿರ ಮತ್ತು 1.60 ಲಕ್ಷ ರೂಗಳನ್ನು ಸೆಫ್ಟ್​​ ಮೂಲಕ ಪಾವತಿಸಿದ್ದಾರೆ. ಹೀಗೆ ಒಟ್ಟು ರೂ 2,92,000 ಪಾವತಿಸಿದ ಬಳಿಕ ಮಂಗಳೂರಿನ ವ್ಯಕ್ತಿಗೆ ವಂಚನೆಯ ಅರಿವಾಗಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details