ಮಂಗಳೂರು: ಸಮಯ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಸ್‌ಗಳನ್ನು ರಸ್ತೆಯಲ್ಲೇ ಅಡ್ಡವಾಗಿ ನಿಲ್ಲಿಸಿ ಪರಸ್ಪರ ಜಗಳವಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಖಾಸಗಿ ಬಸ್ಸುಗಳ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕರ ಜಗಳ: ಮಂಗಳೂರಿನಲ್ಲಿ ನಾಲ್ವರ ಬಂಧನ - ಮಂಗಳೂರು ನಾಲ್ವರು ಬಸ್ ಸಿಬ್ಬಂದಿ ಬಂಧನ
ರಸ್ತೆ ಮೇಲೆ ಎರಡು ಬಸ್‌ಗಳನ್ನು ಪರಸ್ಪರ ಅಡ್ಡವಾಗಿ ಸಿಲ್ಲಿಸಿಕೊಂಡು ಜಗಳವಾಡುತ್ತಿದ್ದ ಚಾಲಕರು ಮತ್ತು ನಿರ್ವಾಹಕರನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ.
police station
ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ಬಂಧಿತರು. ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ಬಸ್‌ಗಳನ್ನು ಅಡ್ಡವಾಗಿ ಸಿಲ್ಲಿಸಿದ ಬಳಿಕ ಚಾಲಕರು ಮತ್ತು ನಿರ್ವಾಹಕರು ಬೈದಾಡಿಕೊಂಡು ತಳ್ಳಾಡಿದ್ದರು.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಸೋಶಿಯಲ್ ಮೀಡಿಯಾ ಸ್ಟಾರ್ ಗಾಯತ್ರಿ ದುರ್ಮರಣ