ಕರ್ನಾಟಕ

karnataka

ETV Bharat / state

ಮೂರು ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ನಿವೃತ್ತ ಯೋಧ ಯಜ್ಞನಾರಾಯಣ ರಾವ್ ನಿಧನ - ಯೋಧ ಸಾವು

ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಬಂಟ್ವಾಳ ಮೂಲದ ಯಜ್ಞ ನಾರಾಯಣ ರಾವ್ ಸಾವನ್ನಪ್ಪಿದ್ದಾರೆ. ಇವರು ಸುಮಾರು 9 ವರ್ಷಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅಂಗರಕ್ಷಕ ಪಡೆಯ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

former soldier yajnanarayana rao died
ನಿವೃತ್ತ ಯೋಧ ಯಜ್ಞನಾರಾಯಣ ರಾವ್ ನಿಧನ

By

Published : Sep 4, 2020, 4:01 PM IST

ಮಂಗಳೂರು/ಬಂಟ್ವಾಳ: ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಯಜ್ಞ ನಾರಾಯಣ ರಾವ್(84) ಅವರು ಸೆ. 1ರಂದು ನಿಧನ ಹೊಂದಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ನರಿಕೊಂಬು ಕೋಮೆ ತರವಾಡು ಮನೆ ನಿವಾಸಿಯಾಗಿದ್ರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

1959ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಅವರು 1971ರಲ್ಲಿ ಇಂಡೋ -ಪಾಕ್ ಯುದ್ಧ ಸೇರಿದಂತೆ ಸ್ವಾತಂತ್ರ್ಯ ನಂತರದಲ್ಲಿ ನಡೆದ ಮೂರು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಭೂಸೇನೆಯಲ್ಲಿ ಸುಬೇದಾರ್ ಪದವಿ ಪಡೆದ ಅವರು ಸುಮಾರು 9 ವರ್ಷಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅಂಗರಕ್ಷಕ ಪಡೆಯ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

1989ರಲ್ಲಿ ಸೇನೆಯಿಂದ ನಿವೃತ್ತರಾಗಿದ್ದು, ಬಳಿಕ ನರಿಕೊಂಬಿನ ಕೋಮೆಯಲ್ಲಿ ಕೃಷಿ ಕಾರ್ಯವನ್ನು ನಡೆಸುತ್ತಿದ್ದು, 80ರ ಹರೆಯದಲ್ಲೂ ಭತ್ತದ ಬೇಸಾಯದಲ್ಲಿ ತೊಡಗಿಸಿಕೊಂಡು ಪ್ರಗತಿಪರ ಕೃಷಿಕರಾಗಿದ್ದರು. ಇನ್ನು ಪಾವಂಜೆ ಕ್ಷೇತ್ರದಲ್ಲಿ ನಡೆದ ಯಾಗದ ಸಂದರ್ಭದ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ. ಜೈಜವಾನ್, ಜೈ ಕಿಸಾನ್ ಎಂಬುದು ಅವರ ಮೂಲಮಂತ್ರವಾಗಿತ್ತು.

ABOUT THE AUTHOR

...view details