ಕರ್ನಾಟಕ

karnataka

ETV Bharat / state

ಜಲಸಿರಿ ಯೋಜನೆಗೆ ನನ್ನ ಶ್ರಮವಿದೆ, ಬಿಜೆಪಿ ಈ ಕ್ರೆಡಿಟ್​ ತೆಗೆದುಕೊಳ್ಳುತ್ತಿದೆ: ಮಾಜಿ ಶಾಸಕ ಲೋಬೋ ಆರೋಪ - Former MLA J R Lobo outrage against BJP

ಯಾರದೋ ಯೋಜನೆಯನ್ನು ತಮ್ಮ ಯೋಜನೆ ಎಂದು ಹೇಳುವ ಬದಲು, ಇದೇ ಯೋಜನೆಗೆ ಸಂಬಂಧಿಸಿದಂತೆ ಭೂಮಿಯನ್ನು ಕಳೆದುಕೊಳ್ಳುವವರಿಗೆ 120 ಕೋಟಿ ಹಣ ಮತ್ತು ತುಂಬೆಯಲ್ಲಿ 7 ಮೀಟರ್​ವರೆಗೆ ನೀರು ನಿಲ್ಲಿಸುವ ಕೆಲಸವನ್ನು ಬಿಜೆಪಿ ಶಾಸಕರು ಮಾಡಲಿ ಎಂದು ಮಾಜಿ ಶಾಸಕ ಜೆ. ಆರ್ ಲೋಬೋ ಸವಾಲೆಸೆದಿದ್ದಾರೆ.

former-mla-j-r-lobo-talk-about-jalasiri-project
ಮಾಜಿ ಶಾಸಕ ಜೆ. ಆರ್ ಲೋಬೋ

By

Published : Aug 13, 2021, 8:23 PM IST

ಮಂಗಳೂರು: ನಗರದಲ್ಲಿ ಕುಡಿಯುವ ನೀರು ಪೂರೈಸಲು ಆರಂಭಿಸಲಾದ ಜಲಸಿರಿ ಯೋಜನೆಗೆ ನನ್ನ ಶ್ರಮವಿದೆ. ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಅದನ್ನು ಮಂಜೂರು ಮಾಡಲಾಗಿದೆ. ಆದರೆ, ಅದರ ಲಾಭವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ. ಆರ್ ಲೋಬೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. 2035 ವರೆಗೆ ಮಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ 2016-17 ರಲ್ಲಿ ಜಲಸಿರಿ ಯೋಜನೆ ರೂಪಿಸಲಾಗಿತ್ತು. 1,400 ಕಿಲೋಮೀಟರ್ ಪೈಪ್​ಲೈನ್​ನ ಈ ಯೋಜನೆಯಲ್ಲಿ ಈಗಾಗಲೇ 190 ಕಿಲೋಮೀಟರ್ ಕಾಮಗಾರಿ ಮುಗಿದು, 200 ಕೋಟಿ ಬಿಲ್ ಕೂಡ ಪಾವತಿಸಲಾಗಿದೆ. ಆದರೆ, ನಿನ್ನೆ ಮುಖ್ಯಮಂತ್ರಿಯಿಂದ ಯೋಜನೆಗೆ ಚಾಲನೆ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದರು.

ಮಾಜಿ ಶಾಸಕ ಜೆ. ಆರ್ ಲೋಬೋ

ಯಾರದೋ ಯೋಜನೆಯನ್ನು ತಮ್ಮ ಯೋಜನೆ ಎಂದು ಹೇಳುವ ಬದಲು, ಇದೇ ಯೋಜನೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವವರಿಗೆ 120 ಕೋಟಿ ಹಣ ಮತ್ತು ತುಂಬೆಯಲ್ಲಿ 7 ಮೀಟರ್​ವರೆಗೆ ನೀರು ನಿಲ್ಲಿಸುವ ಕೆಲಸವನ್ನು ಬಿಜೆಪಿ ಶಾಸಕರು ಮಾಡಲಿ ಎಂದು ಸವಾಲೆಸೆದರು.

ಮಾಜಿ ಶಾಸಕ ಜೆ. ಆರ್ ಲೋಬೋ

ಅವರು ಊಟ ಮಾಡುತ್ತಿದ್ದಾರೆ: ಹೊಸ ಯೋಜನೆಯೊಂದನ್ನು ಮುಖ್ಯಮಂತ್ರಿಗಳಿಂದ ಮಂಜೂರು ಮಾಡಿಸಲು ಹಳೆಯ ಯೋಜನೆಗೆ ಚಾಲನೆ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಯೋಜನೆ ಬಿಜೆಪಿ ಶಾಸಕರಿಂದ ಅಥವಾ ಬಿಜೆಪಿ ಸರ್ಕಾರದಿಂದ ಮಾಡಿರುವ ಯೋಜನೆ ಅಲ್ಲ. ಇದನ್ನು ಮಂಗಳೂರಿನಲ್ಲಿ ನಾನು ಮತ್ತು ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ಪ್ರಯತ್ನಿಸಿ ತಂದಿದ್ದೇವೆ. ಈ ಯೋಜನೆಗೋಸ್ಕರ ಕೇಂದ್ರದವರೆಗೂ ಹೋಗಿದ್ದೇನೆ. ಇದರಲ್ಲಿ ಸ್ವಲ್ಪವೂ ಬಿಜೆಪಿ ಶಾಸಕರ ಅಥವಾ ಸರ್ಕಾರದ ಪ್ರಯತ್ನ ಇಲ್ಲ. ನಾವು ಅಡುಗೆ ಮಾಡಿ ಕೊಟ್ಟದ್ದನ್ನು ಅವರು ಊಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಓದಿ:ನಾಗರಪಂಚಮಿ ಹಾಲು ಚೆಲ್ಲುವ ಹಬ್ಬವಲ್ಲ, ಕುಡಿಸುವ ಹಬ್ಬ.. ಮಕ್ಕಳಲ್ಲೇ ದೇವರನ್ನ ಕಂಡ ಬಸವಪ್ರಭು ಶ್ರೀಗಳು..

ABOUT THE AUTHOR

...view details