ಮಂಗಳೂರು:ರೈತರ ಪ್ರತಿಭಟನೆ ಹತ್ತಿಕ್ಕಲು ಬಳಸಿದ ಲಾಠಿ ವಾಟರ್ ಜೆಟ್ ಮೊದಲಾದವುಗಳು ಚೀನಾ ನಮ್ಮ ಭೂಮಿಯಲ್ಲಿ ಗ್ರಾಮವನ್ನು ನಿರ್ಮಾಣ ಮಾಡಿದಾಗ ಎಲ್ಲಿ ಹೋಯಿತು ಎಂದು ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕಳೆದ ಮೂರು ತಿಂಗಳಿನಿಂದ ದಬ್ಬಾಳಿಕೆ ನಡುವೆಯು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅವರಲ್ಲಿ ನೋವಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರೈತರನ್ನು ನಿರ್ಲಕ್ಷಿಸಿದರೆ ಅವರು ಸರ್ಕಾರವನ್ನು ಕೆಳಗಿಳಿಸುತ್ತಾರೆ. ದೇಶದ ನೆಲದಲ್ಲಿ ಬಂದು ಕೂತಿರುವ ಚೀನಾದವರನ್ನು ವೈರಿ ತರಹ ನೋಡದೆ ಜನಸಾಮಾನ್ಯರು, ಕಾರ್ಮಿಕರು, ರೈತರನ್ನು ಸರ್ಕಾರ ವೈರಿ ತರಹ ನೋಡುತ್ತಿದೆ. ಇದನ್ನು ವಿರೋಧಿಸಿ ಗ್ರಾಮಮಟ್ಟದಲ್ಲಿಯೂ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.