ಮಂಗಳೂರು: ಚೀನಾ ನಮ್ಮ ದೇಶದ ಎಲ್ಒಸಿಗೆ ಬಂದು ಆಕ್ರಮಣ ಮಾಡುತ್ತಿರುವುದನ್ನು ತಡೆಯದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದು, ಈಗ ಅವರ 56 ಇಂಚಿನ ಎದೆ ಎಲ್ಲಿ ಹೋಯಿತು ಎಂದು ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಚೀನಾ ಆಕ್ರಮಣ ಮಾಡಿದರೂ ಪ್ರಧಾನಿ ಮೋದಿ ಮೌನ ಯಾಕೆ: ಖಾದರ್ ಪ್ರಶ್ನೆ - ಚೀನಾ ಭಾರತ ದೇಶದ ಎಲ್ಓಸಿ ಗೆ ಬಂದು ಅಕ್ರಮಣ
ನಮ್ಮ ದೇಶದ ಒಂದಿಂಚನ್ನೂ ಅಕ್ಕಪಕ್ಕದ ಯಾವುದೇ ದೇಶಗಳು ಕಬಳಿಸಲು ಬಿಡಬಾರದು. ಆಕ್ರಮಿಸುತ್ತಿರುವ ಚೀನಾದವರನ್ನು ಒದ್ದೋಡಿಸಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮನೆಗೆ ನುಗ್ಗಿ ಹೊಡೆಯುತ್ತೇವೆ ಅಂದವರು ಇದೀಗ ಮನೆಯೊಳಗೆ ಇದ್ದಾರೆ. ಚೀನಾದವರು ನಮ್ಮ ದೇಶದೊಳಕ್ಕೆ ಇಷ್ಟು ದೂರ ಬಂದರೂ ಮೌನವಾಗಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಪ್ರಧಾನಿಗಳನ್ನು ಮೌನಿ ಅಂತ ಟೀಕಿಸುತ್ತಿದ್ದವರು ಈಗ ಅವರೇ ಮೌನವಾಗಿದ್ದಾರೆ ಎಂದರು.
ಯುಪಿಎ ಸರ್ಕಾರ ಇದ್ದಾಗ ನೇಪಾಳದವರಿಗೆ ಬೆರಳು ತೋರಿಸಲು ಶಕ್ತಿ ಇರಲಿಲ್ಲ. ಈಗ ನೇಪಾಳ, ಚೀನಾ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಏನಾಗುತ್ತಿದೆ ಎಂದು ದೇಶದ ಜನರಿಗೆ ತಿಳಿಸಬೇಕು. ನಮ್ಮ ದೇಶದ ಒಂದಿಂಚನ್ನೂ ಅಕ್ಕಪಕ್ಕದ ಯಾವುದೇ ದೇಶಗಳು ಕಬಳಿಸಲು ಬಿಡಬಾರದು. ಆಕ್ರಮಿಸುತ್ತಿರುವ ಚೀನಾದವರನ್ನು ಒದ್ದೋಡಿಸಬೇಕು. ದೇಶದ ಎಲ್ಲಾ ಜನತೆ ಕೇಂದ್ರ ಸರ್ಕಾರದೊಂದಿಗೆ ಇರುತ್ತಾರೆ ಎಂದರು.