ಕರ್ನಾಟಕ

karnataka

ETV Bharat / state

ಮಂಗಳೂರು ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕು ಅನ್ನೋದು ಕಪೋಲಕಲ್ಪಿತ: ರಮಾನಾಥ ರೈ - Ramanatha Rai press meet in manglore

ಮಂಗಳೂರು ಗಲಭೆಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂಬುದು ಕಪೋಲಕಲ್ಪಿತ ವಿಚಾರ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

Former Minister Ramanatha Rai
ಮಾಜಿ ಸಚಿವ ರಮಾನಾಥ ರೈ

By

Published : Dec 22, 2019, 1:42 PM IST

ಮಂಗಳೂರು:ಮಂಗಳೂರು ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು‌ ನೀಡಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪ ಕಪೋಲ ಕಲ್ಪಿತವಾದದ್ದು. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ರಮಾನಾಥ ರೈ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗಲಭೆಗೆ ಮುಖ್ಯ ಕಾರಣ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು. ಉದ್ದೇಶ ಪೂರ್ವಕವಾಗಿ ಗಲಭೆ ಮಾಡುವ ದೃಷ್ಠಿಯಿಂದ ಐಪಿಸಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹಾಕಿದ್ದರು. ಘಟನೆಯ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಆಗ ತಪ್ಪಿತಸ್ಥರು ಯಾರು? ಎಂಬುದು ತಿಳಿಯುತ್ತದೆ. ಸುಮ್ಮನೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಗುತ್ತಿದ್ದು ಪಕ್ಷದ ವಿರುದ್ಧ ಅಪಪ್ರಚಾರ ಮಾಡುವ ಕೆಲಸವಾಗುತ್ತಿದೆ ಎಂದರು.

ಗೋಲಿಬಾರ್​ನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದು ಸರ್ಕಾರದ ಕೃಪೆಯಿಂದ ನಡೆದ ಹತ್ಯೆ. ಸಂತ್ರಸ್ತ ಕುಟುಂಬವನ್ನು ಸಂತೈಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಬರಲು ತಡೆಗಟ್ಟಿದ್ದಾರೆ. ಇದು ಪ್ರಜಾಪ್ರಭುತ್ವದ ಸರಿಯಾದ ಕ್ರಮವಲ್ಲ. ವಿಪಕ್ಷ ನಾಯಕರು ಬರುವುದು ಜನರಿಗೆ ಸಾಂತ್ವನ ಹೇಳಲು ಅವರಿಗೂ ಜವಾಬ್ದಾರಿ ಇದೆ ಎಂದರು.

ಕಾಂಗ್ರೆಸ್ ಎಲ್ಲಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ತಮ್ಮ ಸರ್ಕಾರದ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದಿನ ಘಟನಾವಳಿಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು ಯಾರು ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಗಲಭೆ ಸೃಷ್ಟಿಸಿದೆ ಎನ್ನುವಂತಹದ್ದು ಅವರ ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಂಗಳೂರು ಭೇಟಿಯ ವೇಳೆ ಪ್ರಚೋದನಕಾರಿ ಭಾಷಣ ಮಾಡುವ ನಳಿನ್ ಕುಮಾರ್ ಕಟೀಲ್ ಅವರು ಬಂದಿದ್ದು, ಅವರು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಬಂದೂಕುಗಳು ಇರುವುದು ಪೂಜೆ ಮಾಡಲು ಅಲ್ಲ ಎಂದು ಕೇಂದ್ರ ಮಂತ್ರಿ ಸುರೇಶ್ ಅಂಗಡಿ ಹೇಳಿದಂತೆ ಹಿಂದೆ ಯಾವತ್ತೂ ಈ ರೀತಿ ಕಾಂಗ್ರೆಸ್ ಮಂತ್ರಿಗಳು ಮಾತನಾಡಿಲ್ಲ. ಕೇಂದ್ರ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ABOUT THE AUTHOR

...view details